ರೈಲು ನೀತಿ ಹಿಂಗ್ಯಾಕ ಐತಿ??
ನಮಸ್ಕಾರ. ಹೇಗಿದೀರಪ್ಪ? ನಮಗಂತೂ ನಮ್ಮ ನಾಡಲ್ಲಿ ನಡೆಯೋ ರೀತಿನೀತಿ ಸರಿಯಾಗಿ ಕಾಣಿಸ್ತಿಲ್ಲ !! ಹಂಗಾಗಿ ನಾನಂತೂ ಚೆನ್ನಾಗಿಲ್ಲ.
ಮೊನ್ನೆ ಹೈದೆರಬದಗೆ ಹೋಗಿದ್ದೆ ಅಲ್ಲಿಯ ವ್ಯವಸ್ಥೆ ನೋಡಿ ನನಗೆ ಸರಿಯನ್ನಿಸಿತು ಹೌದು ಒಂದು ನಾಡಿನಲ್ಲಿ ಅಲ್ಲಿಯ ಬಾಷೆಗೆ ಮೊದಲ ಆದ್ಯತೆ ಕೊಡಬೇಕಲ್ಲವೇ ? ಅದಕ್ಕೆ ತಕ್ಕಂತೆ ಇದೆ ಅಲ್ಲಿ ಕಂಡು ಬಂತು ಸಾರಿಗೆ ಬಸ್ಗಳು ಇರಲಿ ಮೆಟ್ರೋ ರೈಲು ಅಷ್ಟೇ ಅಲ್ಲ ದಕ್ಷಿಣ -ಮದ್ಯ ರೈಲು ಕೂಡ ಅಲ್ಲಿಯ ಜನಕ್ಕೆ ಅರ್ಥವಾಗೋ ಹಾಗೆ ತೆಲಂಗು ಬಾಷೆಯಲ್ಲಿ ಮಾಹಿತಿವಿವರಗಳನ್ನ ನೀಡಿದೆ.
ನಮ್ಮೂರಾಗ ಯಾಕಪ್ಪ ಹಿಂಗ ಆಡ್ತವ್ರೆ ??
ಅಲ್ಲ ಈ ನೈಋತ್ಯ ರೈಲು ಇರೋದು ನಮ್ಮ ಹುಬ್ಬಳ್ಳಿಯಲ್ಲಿ ಇದರ ವ್ಯಾಪ್ತಿಯಲ್ಲೇ ರಾಜ್ಯದ ಬಹುತೇಕ ರೈಲು ಕೇಂದ್ರಗಳು ಒಳಪಡುತ್ತವೆ ಅದೇ ವ್ಯಾಪ್ತಿಗೆ ವಿಜಾಪುರ-ಹುಬ್ಬಳ್ಳಿ -ಬೆಂಗಳೂರು ಗೋಲಗುಮ್ಮಟ ಎಕ್ಷ್ಪ್ರೆಸ್ಸ ರೈಲು ಬಂಡಿ ಕೂಡ ಸೇರಿದೆ ಅಲ್ಲಿ ನೋಡಿದ್ರೆ ಕನ್ನಡಿಗರಿಗೆ ಅನುಕೂಲವಾಗುವಂತೆ ಒಂದು ಮಾಹಿತಿ ಕೂಡ ಕೊಟ್ಟಿಲ್ಲ. ಒಂದು ಕಣ್ಣಿಗೆ ಬೆಣ್ಣೆ iಇನ್ನೊಂದು ಕಣ್ಣಿಗೆ ಸುಣ್ಣ ಅಂದ್ರೆ ಇದೇನಾ? ಕನ್ನಡಿಗರಿಗೆ ಮೊದಲು ಬಾರತೀಯನಾಗು ಎಂದು ಕಿವಿ ಮೇಲೆ ಕೆಂಪುತೋಟ(ಲಾಲ್ಬಾಗ್) ಇಟ್ಟವರಲ್ಲಪ್ಪ. ಕೆಳಗಿನ ಚಿತ್ರಗಳನ್ನು ನೋಡಿ ವಿಜಾಪುರ-ಬೆಂಗಳೂರು ನಡುವೆ ಓಡಾಡೋ ಬಂಡಿಯಲ್ಲಿ ಹಿಂದಿ-ಇಂಗ್ಲಿಷ್ ಮಾತ್ರ.ಹೆದರಬಾದ್ ನಿಂದ ವಿವಿದ ಊರಿಗೆ ಹೊರಡುವ ರೈಲುಗಳಲ್ಲಿ ತೆಲಂಗು ನೀಡಲಾಗಿದೆ.
ದಕ್ಷಿಣ ಮದ್ಯ ರೈಲು ಹೆದ್ರಬಾದ್ ನಲ್ಲಿ ಕೇಂದ್ರ ಹೊಂದಿ ಆಂದ್ರ ನಾಡಿನಿಂದ ಸಂಚರಿಸುವ ಎಲ್ಲ ರೈಲುಗಳಲ್ಲಿ ತೆಲಂಗಿನಲ್ಲಿ ವಿವರ ನೀಡಿದ್ದಾರೆ. ಅದೇ ನಮ್ಮ ತೆಂಕಣ -ಪಡುವಣ (ನೈಋತ್ಯ) ರೈಲಿನ ಕೇಂದ್ರ ಹುಬ್ಬಳ್ಳಿಯಲ್ಲಿ ಹೊಂದಿ ಬರಿ ಬಿಹಾರಿಬಾಬುಗಳ ಆಳ್ವಿಕೆಯಲ್ಲಿ ನಡೀತಾ ಇದೆ. ಕನ್ನಡಿಗರು ಮಾತ್ರ ಬಾರತ ಬಾರತೀಯತೆ ಅಂತ ಕಥೆ ಕೇಳ್ಕೊಂಡು ತಮ್ಮ ನಾಡಲ್ಲಿ ಕನ್ನಡ ವಿಲ್ಲದೆ ಅನಾಥರಾಗಿದ್ದಾರೆ.
ಕನ್ನಡಿಗರನ್ನ ಯರ್ರಬಿರಿ ಉಗಿದು ಹಿಂದಿಗರನ್ನೇ ನೈರುತ್ಯ ರೈಲಿನಲ್ಲಿ ತುಂಬಿರುವ ಲಾಲೂ ಯಾದವ ಅವರ ಕೊಡುಗೆಯೇ ಇದು. ತಲೆತಲಾಂತರದಿಂದ ಕನ್ನಡಿಗರ ಮೇಲೆ ಇಂಥ ಗದಾಪ್ರಹಾರ ನಡೆದಿದೆ.ಒಂದೆಡೆ ಹಿಂದಿ ಹೇರಿಕೆ ಇನ್ನೊಂದೆಡೆ ನಮ್ಮ ಬಾಶೆಯಲ್ಲಿ ದೊರೆಯದೆ ಪರಬಾಷೆಗೆ ಮೊರೆಹೊಗಬೇಕಾದ ಕನ್ನಡಿಗರ ದು- ಸ್ತಿತಿ.

ಮುನಿಯನ ಮಾದರಿ:
ರಾಜ್ಯದವರೇ ಆದ ಕೇಂದ್ರದ ರಾಜ್ಯ ರೈಲು ಸಚಿವ ಕೆ.ಎಚ್.ಮುನಿಯಪ್ಪನವರು ಸುಮ್ಮನೆ ಇರದೇ ನಮ್ಮ ಬಾಗದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಸ್ವಲ್ಪ ತೆರೆಯಳೆಯಬೇಕಿದೆ. ನೈರುತ್ಯ ರೈಲ್ವೆಯಲ್ಲಿ ಲಾಲೂ ಬರಿ ಬಿಹಾರಿಗರನ್ನು ತುಂಬಿದಾಗ ರಾಜ್ಯದ ಸಚಿವ,ಶಾಸಕರು,ಸಂಸದರು ಮೌನಕ್ಕೆ ಶರಣಾಗಿದ್ದರು.ಈಗಲೂ ಇದೆ ಮಾದರಿ ಅನುಸರಿಸಿದರೆ ನಮಗೆ ಹಣೆ ಮೇಲೆ ಪಂಗನಾಮ, ಬಾಯಿಗೆ ಮಣ್ಣು ಕಚಿತ.
ಹಿಂಗ ಮಾಡ್ರಿ:
ಮೊನ್ನೆ ಗೆಳೆಯನೊಬ್ಬ ಗದಗನಿಂದ- ಹುಬ್ಬಳ್ಳಿ ಗೆ ಹೊರಡುವಾಗ ರೈಲಿನ ಚೀಟಿಯಲ್ಲೂ ಕನ್ನಡವೇ ಇಲ್ಲವೆಂದು ತಮ್ಮ ಬೇಸರ ವ್ಯಕ್ತ ಪಡಿಸಿದ್ದರು.ಇದೆ ರೀತಿ ಶಿವಮೊಗ್ಗ-ಬೆಂಗಳೂರು ರೈಲಿನ ಮಾರ್ಗದಲ್ಲೂ ಕನ್ನಡದಲ್ಲಿ ಮಾಹಿತಿಯೇ ಇಲ್ಲವೆಂದು ಗೆಳೆಯರು ತಿಳಿಸಿದ್ದರು.ಕೇಂದ್ರದ ಅಧೀನದಲ್ಲಿರುವ ಪೋಸ್ಟ್,ಬಿ.ಎಸ್.ಏನ್.ಎಲ್ ಸಂಸ್ಥೆಗಳಿಂದ ಮೊದಲು ಮೂಡುತ್ತಿದ್ದ ಕನ್ನಡ ನಿದಾನವಾಗಿ ಮಾಯವಾಗಿದೆ. ಸುಮ್ಮನೆ ಕೂತು ಹೋಗಲಿ ಬಿಡು ಅನ್ನೋ ಕನ್ನಡಿಗರ ವಿಶಾಲ ಮನೋದೋರಣೆಗೆ ಕೇಂದ್ರ ಸರಕಾರ ಕೊಡುತ್ತಿರುವ ಕೊಡುಗೆ ಇದು. ಈಗ್ಲಾದ್ರೂ ನಾವೆಲ್ಲರೂ ಎಚ್ಚೆತ್ತು ಇದನ್ನ ವಿರೋಧಿಸಬೇಕಾಗಿದೆ. ಹಿಂದಿ ಹೇರಿಕೆಗೆ ಕಡಿವಾಣ ಹಾಕೋಣ. ಬನ್ನಿ ಕೆಳಗಿನ ಮಿನ್ಚಂಚೆಗೆ ಮಿನ್ಚಾಯಿಸಿ ಈ ದುರಾಡಳಿತಕ್ಕೆ ವಿರೋಧಿಸಿ:
cpro@swr.railnet.gov
lways.gov.in,khmuni@sansad
.nic.in