Friday, November 4, 2011

ಈ ದೀಪಾವಳಿ ನೀವು ದಿವಾಳಿ ಆಗ್ಲಿಲ್ಲ ತಾನೇ?




ನಮಸ್ಕಾರ ಕಣ್ರಪ್ಪ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ಅದೇನೋ ಇತ್ತೀಚಿಗೆ ಈ ಎಲ್ಲ ಪ್ಯಾಟೆ ಜನಗಳು ಬಂದು ಹ್ಯಾಪಿ ದಿವಾಳಿ ಹ್ಯಾಪಿ ದಿವಾಳಿ ಅಂತ ಕೈಕುಲ್ತವ್ರೆ.ಯಾಕಅಣ್ಣ   ಹಿಂಗೆ ಅಂದ್ರೆ ದೀಪಾವಳಿ ಸುಭಾಸಯನ ಪ್ಯಾಟೆಲಿ ಈ ರೀತಿ ಕಣ್ಲ ಹೇಳೋದು ಅಂತ ನಮ ಮುಖಕ್ಕೆ ತಿವಿತ ಇದ್ರೂ.ಅಲ್ಲಪ್ಪ ದೀಪಾವಳಿ ವರುಷಕ್ಕೊಮ್ಮೆ ಬರೊ ದೀಪದ ಹಬ್ಬ ನಮ್ಮ ನಾಡಿನ ಎಲ್ಲೆಡೆ ಸಂಭ್ರಮ ಖುಷಿಯಿಂದ ಆಚರಿಸ್ತವ್ರೆ,ಈ ನಡುವೆ ಯಾವ್ನಿಗಾದ್ರು ದಿವಾಳಿ ಆಗು ಅಂದ್ರೆ ಚೆಂದಕ್ ಇರ್ತದ ನೀವೇ ಹೇಳಿ! ಇಂಥ ಹಬ್ಬದಲ್ಲಿ ಇನ್ನೊಬ್ಬರಿಗೆ ಅದ್ಹೆಂಗ ರೀ ದಿವಾಳಿ ಆಗು ಅಂತ ಹೇಳೋಕೆ ಮನಸು ಬರ್ತದೆ? ಅಯ್ಯೋ ಅದು ಹಿಂದಿ ಜನ ದೀಪಾವಳಿಗೆ ದಿವಾಳಿ ಅಂತ ಕರಿತಾರೆ ಅಂತ ನಮ್ಮ ಬೋರನ ಮಗ ನಿಂಗ ಹೇಳ್ತಾ ಇದ್ದ, ಆಗ್ಲೇ ಶ್ಯಾನೆ ವಿಶಯ(ವಿಷ) ಎಲ್ಲ ಗೊತ್ತಾಗಿದ್ದು. ಈ ಟಿ.ವಿ. ನಲ್ಲೂ ಅದೆಸ್ಟೋ ಸಾರಿ ಹ್ಯಾಪಿ ದಿವಾಳಿ ಅನ್ನೋದು ಕಂಡಿದ್ದೆ,ಸುಮ್ನೆ ಅರ್ಥ ಆಗದೆ ದಿವಾಳಿ ಆಗೋದೇ ಸರಿ ಅಂತ ಸುಮ್ಮನಿದ್ದೆ.ನೀವು ನೋಡು ದಿನ ನಿತ್ಯದ ಎಲ್ಲ ಕೊಕ್ ನಿಂದ ಹಿಡಿದು ಕಾರ್ ಮಾರೋ  ಎಲ್ಲ ಕಂಪನಿಗಳು ಕನ್ನಡ ಗ್ರಾಹಕರಿಗೆ ದಿವಾಳಿ ಆಗಿ ಅಂತ ಶುಭ ಹಾರೈಸ್ತ ಅವ್ರೆ.ಕೇರಳ,ಆಂಧ್ರ,ತಮಿಳ್ ನಾಡಿನ ಆಭರಣ ಅಂಗಡಿಗಳು ಗುಜರಾತ್,ಮಹಾರಾಷ್ಟ್ರದ ಸಿಹಿತಿಂಡಿ ಮಾರಾಟಗಾರರು,ಡೆಲ್ಲಿ-ಪಂಜಾಬ್-ಕಲ್ಕತ್ತಾ ಮೂಲದ ಬಟ್ಟೆ ವ್ಯಾಪಾರಿಗಳೆಲ್ಲ ನಮಗೆ ಟೋಪಿ ಹಾಕಿ ಹ್ಯಾಪಿ ದಿವಾಳಿ ಅಂದ್ರೆ ನಮ್ಮ ಜನಗಳು ದಿವಾಳಿ ಎದ್ದ್ರು ಟೋಪಿ ಹಾಕಿಸ್ಕೊಂಡು ಸಂತೋಷದಿಂದ ಇರೋದು ನೋಡಿದ್ರೆ, ಕನ್ನಡಿಗರ ಮುಗ್ಧತೇನೋ ಅಥವಾ ಮೂಢತೆನೋ ಅಂತ ಅರ್ಥ ಆಗ್ತಿಲ್ಲವೇ! ನೂರ  ಕ್ಕೆ ನೂರು ಇದು ಮೂಢತನನೆ.
ನಾವೆನಪ್ಪ ಮಾಡುದು ನಮ್ಮ ಕೈಲಿ ಏನಿದೆ ಅಂತೀರಾ?

ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವೂ ಮುಂದೆ..ಅಂತ ನಮ್ಮ ರಾಜಣ್ಣ ಹೇಳಿದ್ದು ಮರೆತು ಹೋದ್ರ? ನೀವು ಇವತ್ತು ಕೊಕ್ ಖರಿದೀಸಿ ಅಥವಾ ಕಾರು ಹ್ಯಾಪಿ ದಿವಾಳಿ ಅಂದ್ರೆ ಅವರಿಗೆ ನೀವು ತಿಳಿ ಹೇಳಿ.ವಿವಿಧ ಕಂಪನಿಗಳ ಇಮೇಲ್,ಮಿಂಚೆ ವಿಳಾಸ ತಗೊಂಡು ಮಿಂಚೆ ಬರೆಯಿರಿ.ಕರ್ನಾಟಕದಲ್ಲಿ ದಿವಾಳಿ ಅನ್ನೋದು ತಪ್ಪು ಕಣ್ರೋ, ದೀಪಾವಳಿ ಅಂತ ಒತ್ತಿ ಹೇಳಿ.ಇನ್ನು ಹಲವಾರು  ಬ್ಯಾಂಕಿನವರು ತಮ್ಮ  ಖಾತೆದಾರರಿಗೆ  ಧನ ತ್ರಯೋದಶಿ ಗೆ "ಧನ ತೇರಸ್ " ಅಂತ ಹಿಂದಿಗರ ಹಬ್ಬದ ಬಗ್ಗೆ ಹೇಳಿ ಬಂಗಾರ ಕೊಳ್ಳೋಕೆ ಉತ್ತಮ ದಿವಸ ಅಂತ ಹಿಂದಿ ಹೇರೋಕೆ ಬರ್ತಾವ್ರೆ.ಈ ಬ್ಯಾಂಕ್ ನಲ್ಲಿರೋ ಅಧಿಕಾರಿಗಳಿಗೂ ಪತ್ರ ಬರೀರಿ,ಇಮೇಲ್ ಮಾಡಿ.
ನಾನಂತೂ ಅಕ್ಷಿಸ್ ಬ್ಯಾಂಕಿನ ಅಧಿಕಾರಿಗಳಿಗೆ ಮಿಂಚೆ ಬರೆದು ನನಗೆನು ಬೇಕು ಅದನ್ನ ಹೇಳಿಯೇ ಬಿಟ್ಟೆ ( ನಾನು ಬರೆದ ಪತ್ರದ ಪ್ರತಿ ಪಕ್ಕಕ್ಕೆ ಒಂದು ಚಿತ್ರ ಹಾಕೀನಿ-ವಸಿ ಜೂಮ್ ಮಾಡ್ಕೊಂಡು ನೋಡ್ಕೊಳ್ಳಿ).ಹಿಂಗೆ ಬಿಟ್ಟರೆ ಲಾಲೂ ಬಂದು ನಮ್ಮ ನೈಋತ್ಯ ರೈಲ್ವೇಲಿ ಬಿಹಾರಿಗಳನ್ನ ತುಂಬಿದಂಗೆ ಎಲ್ಲ ಹಿಂದಿ ಜನಗಳು ಬಂದು ಕನ್ನಡ ಅಚ್ಚ ನಹಿ, ಹಿಂದಿ ರಾಷ್ಟ್ರ ಭಾಷಾ ಅಂತ ಮೂರು ನಾಮ ಹಾಕಿ ನಮ್ಮನ್ನ ನಮ್ಮೂರಲ್ಲೇ ಪರದೇಶಿ ಮಾಡೋದು ದೂರ ಇಲ್ಲ ಹುಷಾರ್!

ದೀಪಾವಳಿ ನಿಮ್ಮ ಬಾ
  ಅಂಧಕಾರ ದೂರ ಮಾಡಲಿ,ರಾಜ್ಯೋತ್ಸವದ ಶುಭ ಹಾರೈಕೆಗಳೊಂದಿಗೆ,
ಜಯತೀರ್ಥ.

Saturday, July 23, 2011

ಸಿಂಹ ಬೊಗಳತ್ತಂತೆ ನೋಡ್ರಪ?

ಎನ್ರಪ, ಎಲ್ಲಾರೂ ಹೆಂಗದಿರಿ?
 ಅದ್ಯಾವನೋ ರೋಹಿತ್ ಶೆಟ್ಟಿ ಅಂದ್ರೆ? ಹೆಸರು ನೋಡಿದ್ರೆ ಒಳ್ಳೆಯ ಕರಾವಳಿ ಕನ್ನಡಿಗ ಇದ್ದಂಗ ಅನಿಸತೈತಿ, ಮಾಡ್ತಾ ಇರೋ ಕೆಲಸ ನೋಡಿದ್ರೆ ಕನ್ನಡಿಗರೇ ಎಕ್ಕಡ ತಗೊಂಡು ಹೊಡ್ಯೋ ಹಂತ ಕೆಲಸ ಮಾಡ್ತಾನಲ್ರೋಪ. ಈ ತರಹ ಸುದ್ದಿ ಚರ್ಚೆ ನಿನ್ನೆ ನಮ್ಮ ಬಿಜಾಪುರ,ಬೀದರ,ಬೆಳಗಾವಿ, ಹುಬ್ಬಳ್ಳಿ ಎಲ್ಲ ಕಡೆ ಸಾಮಾನ್ಯ ವಾಗಿದ್ದು.
ಸುದ್ದಿ ಏನು ಅಂತ ಹೇಳೋದೇ ಮರೆತೇ ನೋಡಿ: 'ಸಿನ್ಘಂ'ಅಂತ ಒಂದು ಹಿಂದಿ ಚಿತ್ರ ಮೊನ್ನಿ ಶುಕ್ರವಾರ ಎಲ್ಲ ಕಡೆ ಬಿಡುಗಡೆ ಮಾಡ್ಯಾರ.ಅದರೋಳಾಗ ಮತ್ತೊಬ್ಬ ಕನ್ನಡಿಗ ಪ್ರಕಾಶ ರೈ ಮತ್ತು ಹೀರೋ ಅಜಯ ದೆವ್ಗುನ್ ನಡುವಿನ ಡೈಲಾಗ್ ದಾಗ ಕರ್ನಾಟಕದ ಸೀಮ್ಯಗಿಂದ ಜನ ಕರ್ಕೊಂಡು ಬಂದು ನಿಂಗ ಹೊಡ್ತಿನೋ ಮಗನೆ ಅಂತ ಪ್ರಕಾಶ್ ರೈ ಹೇಳಿದ್ರೆ,ಅಜಯ ನೀವು ಕನ್ನಡ ಮಂದಿ ನಾಯಿ ಇದ್ದಂಗ.ನಿಮ್ಮಂಥ ನಾಯಿಗೋಳಿಗೆ ನಾನೊಬ್ಬ ಸಾಕು ಅಂತ ಹೇಳ್ತಾನ.

ಉಂಡ ಮನಿಗೆ ದ್ರೋಹ ಬಗಿಯೋ ಗಂಡೆದೆ ಇಲ್ಲದ ಪುಂಡರನ್ನು ಜೀವ ಹಿಂಡೆನ್ದ ಪರಮಾತ್ಮ:

ಇಂಥ ಘಟನೆ ನಡೀಲಿ ಕತ್ತಿರೋದು ಇದೆ ಮೊದಲಲ್ಲರಿ. ನಮ್ಮ ಊರಾಗ ಬಂದು ನಮ್ಮ ಮನ್ಯಾಗ ತಿಂದು ನಮಗೆ ಬೈದು ಹೋಗು ನಾಯಿ ಜಾತಿ ಜನ ಬಹಳಷ್ಟು ಹುಟ್ಟಕೊಂಡಾರ್. ಅಲ್ಲಲ್ಲ ನಾಯಿ ಜಾತಿ ಅಲ್ಲ, ನಾಯಿನೂ ಇವರಿಗಿಂತ ನಿಯತ್ತಿಂದು ಪಾಪ ಅದರ ಕಿಮ್ಮತ್ತು ಕಮ್ಮಿ ಆದೀತು. ಇವರೆಲ್ಲ ನಾಯಿಗಿಂತ ಕಡೆ.ಈ ಮೊದಲು ಕೇಂದ್ರ ರೈಲ್ವೆ ಮಂತ್ರಿ ಇದ್ದನಲ ಅದೇ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಂತೆ ಇರುವ ಲಾಲೂ ಪ್ರಸಾದ ಯಾದವ್, ಈ ಮಗ ನಮಗೆ ಕಚಡಾಗಳು ಅಂತ ಕರ್ನಾಟಕಕ್ಕೆ ಬಂದಾಗ ಬೈದು ಹೋಗಿದ್ದ.ಬರಿ ತಮ್ಮ ಬಿಹಾರಿ ಬಾಬುಗಳನ್ನೇ ನಮ್ಮ ಹುಬ್ಬಳ್ಳಿ  ನೈಋತ್ಯ ರೈಲ್ವೆ ತುಂಬಾ ತುಂಬಿ, ತಮ್ಮ ತವರಿನಲ್ಲಿ ಕೆಲಸ ಇಲ್ಲದೆ ನಾವೇ ತಬ್ಬಲಿ ಆಗೋ ಹಂಗ ಮಾಡಿದ ಕೀರ್ತಿ ಈ ಮಹಾಶಯನಿಗೆ ಹೋಗ್ಬೇಕು.
ಇನ್ನ್ನೊಬ್ಬ ಇಲ್ಲೇ ಮಗ್ಗಲ ಮುಳ್ಳು , ಅದೇ ರೀ ರಜನಿಕಾಂತ!! ಈ ಸಾಹೇಬ್ರೆ ಕಾವೇರಿ ವಿವಾದ ಆದಾಗ ಕನ್ನಡಿಗರಿಗೆ ಒದ್ದರೆ ಚಲೋ ಇರ್ತದ ಅಂತ ಓದರಕೊಂಡು, ತನ್ನ ಚಿತ್ರ ಕನ್ನಡ ನಾಡಿನಾಗ ಬಿಡುಗಡೆ ಆಗುಮುಂದ ಬಾಲ ಸುಟ್ಟ ಬೆಕ್ಕಿನಂತೆ ಕ್ಷಮಾಪಣೆ ನಾಟಕ ಮಾಡಿದ್ರು. ಇವ್ರು ಏನು ಕಮ್ಮಿ ಇಲ್ಲ, ಬೆಂಗಳೂರಿನಾಗ ಹುಟ್ಟಿ ಬೆಳೆದು ಕಾವೇರಿ ನೀರು ಕುಡಿದು, ತಮಿಳನ್ಯಾಗ ಕೀರ್ತಿ ಗಳಿಸಿ,ಸಾಕಿದ ತಾಯಿಗೆ ಒದ್ದು ಓಡಿ ಹೋಗು ಚಿಲ್ಲರ ಬುದ್ದಿ ಇದ್ದವರು.

ಬಿಗ್ ಸಮೂಹ ಬಗ್ಗೋದು ಹೆಂಗ:
  • ಕೃಷ್ ಅನ್ನೋ ಹಿಂದಿ ಸಿನಿಮಾ ನ ನಿಯಮ ಬಾಹಿರವಾಗಿ ಹೆಚ್ಚಿನ ಪ್ರಿಂಟ್ ಕರ್ನಾಟಕದಾಗ ರಿಲೀಸ್ ಮಾಡಿದ್ದವರು 
  • ಬಿಗ್ ಎಫ್.ಎಂ ದಾಗ ಕನ್ನಡ ಚಿತ್ರರಂಗಕ್ಕೆ ಅವಹೇಳನಕಾರಿ ಮಾತಾಡಿದ್ದು.
ಇದೆ ಪುಂಡರೆ ಈ ಸಿನ್ಘಂ ಅನ್ನೋ ಚಿತ್ರದ ಮುಖ್ಯ ನಿರ್ಮಾಪಕರು.ರಿಲಾಯನ್ಸ್ ಸಂಸ್ಥೆ ಅಡಿಯಲ್ಲಿ ಬರೊ ಈ ಬಿಗ್ ಸಮೂಹ ಕಂಪನಿಗಳು ಮ್ಯಾಲೆ ಮ್ಯಾಲೆ ನಮ್ಮ ತಂಟೆಗೆ ಬರಾಕತ್ತಾರ. ಅಷ್ಟ ಅಲ್ಲರಿ ಈ ಬಿಗ್.ಎಫ್.ಎಂ ಕನ್ನಡ ಹಾಡು ಪ್ರಸಾರ ಮಾಡಿ ಬೆಂಗಳೂರುನ್ಯಾಗ ನಂಬರ ವನ ಸ್ಥಾನ ಪಡಕೊಂಡು, ಈಗ ನದಿ ದಾಟಿದ ಮೇಲೆ ಅಮ್ಬಿಗ್ಯಾಂದು ಏನು ಕೆಲಸ ಅಂತ ಕನ್ನಡ ಸಂಗೀತ ಬಿಟ್ಟು ಹಿಂದಿ ಹಿಂದಿ ಅಂತ ಹೊಡ್ಕೋತ ಇದ್ದಾರೆ.ಅದಕ್ಕೆ ಈ ಎಫ್.ಎಂ ಚಾನೆಲ್ ನನ್ನ ಮೊಬೈಲ್ ದಿಂದ ಡಿಲೀಟ್ ಮಾಡಿನಿ.ನನ್ನ ಗೆಳೆಯರು ಅದೇ ಮಾಡಕತ್ತರ ನೋಡ್ರಿ. ನೀವು ಇವರಿಗೆ ಹಿಂಗೆ ಬಗ್ಗಿಸಿದ್ರೆ ಬಗ್ಗೋದು ಇಲ್ಲಾಂದ್ರೆ ನಮಗೆ ನಾಯಿ ಪಾಡೇ ಮಾಡುದಂತು ೧೦೦% ಖರೆ.

ಒಂದೇ ಒಂದು ಪ್ರಶ್ನೆ:

ನಿವೆಲ್ಲಾರಿಗೂ ನನ್ನ ಕಡೆಯಿಂದ ಒಂದೇ ಒಂದು ಪ್ರಶ್ನೆ,ಏನ ಅಂದ್ರೆ: ಕರ್ನಾಟಕ ಮತ್ತು ಕನ್ನಡಿಗರು ಅಂದ್ರೆ ಏನು ತಿಳ ಕೊಂಡಾರ ಈ ಜನ? ಬೇಕಾದವ ಬಂದು, ಬಾಯಿ ಬಂದಹಂಗ ಬೈಸಿ ಕೊಳ್ಳಕ ನಾವೇನು ಬಿಟ್ಟಿ ಬಿದ್ದಿವ? ಅಲ್ಲರಿ ಪದೇ ಪದೇ ನಮ್ಮ ಸ್ವಾಭಿಮಾನಕ್ಕೆ ಈ ರೀತಿ ಪ್ರಶ್ನೆ ಹಾಕ್ತ ಇರೋ ಈ ಜನಕ್ಕೆ ನಾವೇ ಯಾಕೆ ಉತ್ತರ ಕೊಡದೆ ಹಂಗೆ ಕೈ ಕಟ್ಟಿ ಕುತಿವಿ?
ಸುಮ್ಮನೆ ಇದ್ರೆ ಹಿಂಗ ಊರು ಕೊಳ್ಳೆ ಹೊಡೆದು ಹೋದಮ್ಯಾಲೆ ಕ್ವಾಟಿ ಬಾಗಿಲ ಮುಚ್ಚದ್ರಂತ ಅಂತ ಪರಿಸ್ತಿತಿ ಬರುದು ದೂರ ಇಲ್ಲ.ಅದಕ್ಕೆ ಮೊದಲೇ ನಾವು ಜಾಗೃತರಾಗಿ ಎದ್ದೆಳುದು ಮುಖ್ಯ ಅದ.
ಒಂದೇ ಮಾತನಾಗ ಹೇಳಬೇಕು ಅಂದ್ರೆ ಈ ಎಲ್ಲ ಜನಕ್ಕೆ ನಮ್ಮ ಕನ್ನಡದ ಮಾರುಕಟ್ಟೆ ಮ್ಯಾಲೆ ಕಣ್ಣ ಐತಿ,ನಮ್ಮ ಮೂರ್ಖತನದ ಲಾಭ ಇವರಿಗೆ ಸಿಗ್ತಾ ಇದೆ ಅಂದ್ರೆ ತಪ್ಪಲ್ಲ. ನಾವು ಮೊದಲು ಇಂಥವರಿಗೆ ನಮ್ಮ ಮಾರುಕಟ್ಟೆ ಬಿಟ್ಟು ಕೊಡಬಾರದು. ಇರಲಿಕ್ಕೆ ನಿಮ್ಮ ಮನಿ ಬೇಕು ಆದರ ನಿಮ್ಮ ಮಾತು ಬಾಶೆ ಬೇಡ ಅಂದ್ರೆ ಯಾವ ಲೆಕ್ಕರೀ ಇದು? ಹಿಂದಿ ಫಿಲಂಸ್ ಭಾರಿ,ಬಾಲಿವುಡ್ ಮಸ್ತದ ಅಂತ ತಲೆ ಮೇಲೆ ಹೊತ್ತು ಮೆರೆಸುದು ಬಿಟ್ಟು, ನಮ್ಮ ಜನ,ನಮ್ಮ ಬಾಶೆ ಕಡೆ ಸ್ವಲ್ಪ ಕೆಲಸ ಮಾಡ್ಬೇಕು.ಇದರಾಗ ಈ ನಮ್ಮ ಕನ್ನಡ ಸುದ್ದಿ ವಾಹಿನಿಗಳು,ನೆರೆ ಬಾಶೆ ಚಿತ್ರಕ್ಕೆ ಬೇಕಾ ಬಿಟ್ಟಿ ಪ್ರಚಾರ ಕೊಟ್ಟು ಮೆರೆಸ ಕತ್ತಾರ.ಈ ಮಂದಿಗೆ  ನಾವೇ ಮುಂದ ನಿಂತು ತಿಳುವಳಿಕೆ ಹೇಳಬೇಕು. ಇವತ್ತಿಂದು ಐ.ಟಿ.ಯುಗ, ಫೇಸ್ ಬುಕ್,ಟ್ವಿಟ್ಟರ್ ಅಂತ ಸಾಮಾಜಿಕ ತಾಣದಾಗ ಎಲ್ಲರೊಂದಿಗೆ ಸಂಪರ್ಕಿಸ ಬಹುದು.ಇಲ್ಲಿ ನಿಮ್ಮ ವಿಚಾರವನ್ನು ನೇರವಾಗಿ ಸುದ್ದಿ ವಾಹಿನಿಗೆ ಆಗಲಿ,ಜನರಿಗೆ ಆಗಲಿ ನೇರವಾಗಿ ಹೇಳಿ ಜನರಿಗೆ ಬಡಿದೆಬ್ಬಿಸಬಹುದು.
ಸ್ವಾಭಿಮಾನ ಸಾಯಕ ಬಿಟ್ಟು ಸುಮ್ಮನೆ ಕೈಕಟ್ಟಿ ಕೂಡ ಬ್ಯಾಡ್ರಿ.ಬಂಗಾರದ ಮನುಷ್ಯ ಸಿನೆಮಾದಾಗ ನಮ್ಮ ಅಣ್ಣಾವ್ರು ಹಾಡು ನೆನಪು ಮಾಡ್ಕೊಂಡು ಮುಂದ ನಡೀರಿ.

Wednesday, April 20, 2011

ಇದು ಪಕ್ಕ ಕಪ್ಪಿ ತೂಕ ನೋಡ್ರಿ ಸರ್::: ಕಾಪಿ ಚಿಟಿ ನೋಡಿ ಬರಿಬ್ಯಾಡ್ರಿ, ಅದೇ ಕಾಪಿ ಚೀಟಿನ ಪರೀಕ್ಷ ಕೋಣೆಲಿ ಬಾಯಪಾಠ ಮಾಡಿ ಬರೀರಿ ಅಂದಂಗೆ ಆಯಿತು!!!

ನಮಸ್ಕಾರ್ರಿ ; ನಾನ ಜಯತೀರ್ಥ ರೀ  ಅಂತ ಮೊನ್ನೆ ನಮ್ಮ ದೊಸ್ತಗ ಕೈ ಮಾಡಿದ್ರೆ , ಏಮಿ ನಮಸ್ಕಾರ ಮಂಡಿ, ಎಲ್ಲ ಸೌಖ್ಯಮ?ಏಳವುನ್ನರು ಮೀರು ಅಂದ! ಮೊದ್ಲೇ ಉರಿ ಉರಿ ಬಿಸಿಲ ದಿನದಾಗ ಒಮ್ಮೆ ಶಾಕ್ ಹೊಡದಂಗಾತು. ಹೌದ್ರಿ ಮಹಾರಯ್ರೆ. ಏನ್ರೋ  ಏನಿದು ಅಂತ ಕೇಳಿದ್ರೆ ಬ್ಲಾಕ್ ಟಿಕೆಟ್ ತಗೊಂಡು ರಜನಿಕಾಂತ್ ತೆಲುಗು ಪಿಕ್ಚರ್ ನೋಡಿಬಂದಿವಿ,ಆ ಭಾಷೆನು ಅರ್ಥ ಅಗ್ಲಾಕತ್ತೈತಿ ಅಂತ ಖುಷಿಯಿಂದ ಹೇಳಿದ್ದು ನೋಡಿ ಇವರಿಗೆ ಕಾಲಾಗಿನ ಕೆರ  ತಗೊಂಡು ಹೊಡಿಬೇಕು ಅಂತ ಅನಿಸದೆ ಇರ್ಲಿಲ್ಲ . ಅದ್ಯಾಕ್ರೋ ಕನ್ನಡ ಬಿಟ್ಟು ಪರಭಾಷಾ ಪಿಕ್ಚರ್ ನೋಡೋ ರೋಗ ಅಂದ್ರೆ ,ಇವರ ಭಾಷಣ ಕೇಳಿ ಹೆಂಗಿತ್ತು:ನಮ್ಮ ಕನ್ನಡದ ಮಂದಿ ರಜನೀಕಾಂತ್,ಟಾಮ್ ಕ್ರೂಇಸ್ ,ಚೀರನ್ಜೀವಿ , ಇವರನ್ನೆಲ್ಲ ನೋಡ್ಬೇಕು ಅಂದ್ರೆ ತೆಲುಗು,ತಮಿಳ್ ,ಇಂಗ್ಲಿಷ್ ದಾಗ ನೋಡ್ಬೇಕು. ನೋಡಿ ನೋಡಿ  ನಮ್ಮ ಜನ ಆಯಾ ಭಾಷೆ ಕಲಿಲಾಕತ್ತ್ಯಾರು ನೋಡ್ರಿ.ಬಹಳ ಮಂದಿ ನನ್ನ ಗೆಳ್ಯಾರ ರೆಸುಮೆ ನೋಡಿದ್ರೆ ಭಾಷೆಗಳಲ್ಲಿ ತೆಲುಗು,ತಮಿಳ್ ಎಲ್ಲಾನು ಸೇರಿಸಿರ್ತಾರೆ.ಅದ್ಹೆಂಗ ಗೊತ್ತು ನಿಂಗ ಮಗನ ಅಂತ ಕೇಳಿದ್ರೆ:"ಇಲ್ಲೋಲೆ ಮಗನ ಮೊನ್ನೆ ಒಂದೆರಡು ತೆಲುಗು,ತಮಿಳ್ ಪಿಕ್ಚರ್ ನೋಡಿ ಬಂದಿವು, ಸಣ್ಣಗೆ ಅವು ಅರ್ಥ ಆಗ್ತಾ ಇದಾವು ಅಂತ ನಂಗೆ ಮಖಕ್ಕೆ ಹೊಡಿದಂಗೆ ಹೇಳಿದ್ರು ನೋಡ್ರಿ." ಒಂದು ಕ್ಷಣ ನಂಗೆ ಅನಿಸ್ಲಾಕತ್ತಿತ್ತು , ಏನು ಮಾಡುದರಿ ನಾವಂತೂ ಏನೂ ಮಾಡಕ್ಕಾಗಲ್ಲ ನಮ್ಮ ಉದ್ಯಮ ಡಬ್ಬಿಂಗ ವಿರೋಧಿ ಇದೆ, ಅದಕ್ಕೆ ಮುಚ್ಕೊಂಡು ಅರ್ಥ ಆಗದೆ ಇದ್ರೂ ತಮಿಳ್,ತೆಲುಗು,ಮಲಯಾಳಂ ನಲ್ಲೆ ಆಯ ಚಿತ್ರನೋಡಿ ಖುಷಿಪಡಬೇಕು ಅನ್ನೋ ಪರಿಸ್ಥಿತಿ ಹುಟ್ಟಿ ಹಾಕ್ಯಾರ. ಅಲ್ಲರಿ ಗ್ರಾಹಕರಾಗಿ ನಮಗೆ ಬೇಕಾಗೋ ಸೇವೆಗಳಲ್ಲಿ ಆಯ್ಕೆ ನಮಗ ಇರಬೇಕೋ ಅಥವಾ ಸೇವೆ ನೀಡೊನಿಗೆ ಇರ್ಬೇಕು.ಒಂದೇ ಸಲ ವಿಚಾರ ಮಾದ್ರಿ, ನೀವು ನಿಮ್ಮ ಊರಾಗ ಹೋಟೆಲಕ ಹೋದ್ರಿ ಅಲ್ಲಿ ನಿಮ್ಮ ಮುಂದೆ ಸೆರ್ವೆರ್ ಬಂದು ಉಪ್ಪಿಟ್ಟು,ಇಡ್ಲಿ,ದೋಸೆ,ಉತ್ತಪ್ಪ,ವಡೆ, ಅಂತ ಒಂದು ದೊಡ್ಡ ಲಿಸ್ಟೇ ವದರ್ತಾನೆ ಆವಾಗ ನಿಮಗೇನು ಬೇಕೋ ನೀವು ತಗೊತಿರಿ ಹೌದಲ್ಲರಿ? ಹಿಂಗ ಇರ್ಬೇಕಾದ್ರ ಇನ್ನ ನಮ್ಮ ಮನರಂಜನೆಗೆ ಅಂತ ಇರೋ ಸಿನಿಮಾದಾಗೂ ನಾವು ಅದನ್ನ ಕಾಣಬೇಕಲ್ಲ?

ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ನಮ್ಮ ಕಣ್ಣಿಗೆ ಸುಣ್ಣ ಹಾಕಲಾ ಕತ್ತಾರ :
ನಮ್ಮ ಕೆ.ಎಫ್.ಆಯ ನೋಡ್ರಿ ಹಿಂದೆ ಮುಂದೆ ನೋಡದೆ ಡಬ್ಬಿಂಗ್ ಬ್ಯಾಡ್ರೋ ಬ್ಯಾಡ್ರೋ ಅಂತ ಹೊಯ್ಕೋಳ ಕತ್ತ್ಯಾರು,ಸಾಮಾನ್ಯ ಮಂದಿ ನಾವು ಮಾಡುವಸ್ಟು ವಿಚಾರರೆ ಇವರ ಮಾಡ್ತಾರ,ಅದೇನೋ ಅಪ್ಪ ಹಾಕಿದ ಆಲದ ಮರ ಅಂತ ಹೇಳಿ ಅದನ್ನ ಕಂಟಿನ್ಯೂ ಮಾಡಿದ್ರೆ ಹೆಂಗ್ ನಡಿಬೇಕ್ರಿ ಬಾಳೇ? ಈಗ ಜಗತ್ತು ಭಾಳ ಮುಂದು ಹೊಗೈತಿರಿ..ನಾವು ಬೇರೆ ಭಾಷೆ ಸಿನೆಮಾನ ಕನ್ನಡದಾಗ ಡಬ್ಬ ಮಾಡಿದ್ರೆ ನಮ್ಮ ಮಂದಿಗೆ ಕೆಲಸ ಸಿಗತಾವು, ಸಿನೆಮಾ ನಂಬಿ ಬದ್ಕೋ ಎಷ್ಟು ಕುಟುಂಬಗಳು ೨ ಹೊತ್ತು ಚಂದಂಗ ಊಟ ಮಾಡ್ತಾರೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಕನ್ನಡದಾಗೆ ಕಾರ್ಟೂನ್,ಡಿಸ್ಕಾವೆರಿ,ಅನಿಮಲ್ ಪ್ಲಾನೆಟ್,ಪೋಗೋ ಎಲ್ಲ ನೋಡ್ತಾರೆ. ದೂರದ ಬೆಟ್ಟ ಕಣ್ಣಿಗೆ ಸಣ್ಣಗೆ ಚಂದಂಗೆ ಕಾಣತೈತಿ ಅಂತ ಅದನ್ನ ದೂರಿಂದ ನೋಡಿದ್ರೆ ಏನು ಲಾಭ ಇಲ್ಲ್ರಿ,ಬೆಟ್ಟ ಹತ್ತಿ ಅದರ ಮಜಾ ತಗೋಬೇಕು ಅಂದ್ರೆ ನಾವು ಬೆಟ್ಟ ಹತ್ತಾಕ ಬೇಕು! ಇದೆ ರೀತಿ ನಮ್ಮ ಕನ್ನಡ ಸಿನಿಮಾ ಮಂದಿ ದೂರ ದಿಂದ ನೋಡಿ ಡಬ್ಬಿಂಗ್ ಬ್ಯಾಡ, ಅದರಿಂದ ನಮ್ಮ ಜನಕ್ಕೆ ಹಾಳು ಅಂತ ಸುಳ್ಳು ವಾದಿಸಾಕತ್ತ್ಯಾರು! ಇಂಥ ಮೂರ್ಖರಿಗೆ ನಮಂಥ ಕಲಿತ ಮಂದಿ ಬುದ್ಧಿ ಹೇಳಿ ನಮಗೆ ಏನೋ ಬೇಕಾದ್ದು ನಾವು ಆರಿಸ್ಕೊತಿವಿ, ನಿಮ್ಮ ಬದಕು ಹಸನ ಮಾಡ್ತಿವಿ ಅಂದ್ರೆ, ಇವರು ಒಪ್ಪಬೇಕ್ರಿ ಸರ್.ನನಗು ಮಿಶನ್ ಇಮ್ಪೋಸಿಬಲ್ ಅನ್ನೋ ಫಿಲ್ಮದಾಗ ಅದನ ನೋಡ್ರಿ ಟಾಮ್ ಕ್ರೂಇಸ್ ಅವನ್ನ ಸಿನಿಮಾ ಕನ್ನಡದಾಗ ನೋಡ್ಬೇಕು ಭಾಳ ಆಶಾ ಐತಿ, ಆದರ ನೋಡ್ರಿ ಎಂಥ ಜನ ನಮಗೆ ಏನು ಬೇಕೋ ಅದನ್ನ ನೋಡಾಕ ಬಿಡವಲ್ಲರು. ಸಣ್ಣವರು ಇದ್ದಗಿಂದ ನಮ್ಮ ಕನ್ನಡ ಸಾಲಿ ಮಾಸ್ತರು ಹೇಳ್ತಿದ್ರು " ಗ್ರಾಹಕನೇ ರಾಜ, ಗ್ರಾಹಕ ಹೇಳಿದಂಗೆ ವ್ಯಾಪಾರಿ ಕೇಳಬೇಕು, ಅವನಿಗೆ ಏನು ಬೇಕೋ ಅದನ್ನ ನಾವು ಕೊಡಬೇಕಂತ" , ಆದ್ರ ನಮ್ಮ ಕೆ,ಎಫ್.ಆಯ ನೀತಿ ನೋಡಿದ್ರೆ ಇದಕ್ಕ ತದ್ವಿರುದ್ಧ ನಡೆದುಕೊಂಡು ನಮಗೆ ದ್ರೋಹ ಬಗ್ಯಾಕತ್ತದ. ಇದನ್ನ ಮುಂದವರೆಸಿದ್ರ ನಮ್ಮ ಜನಕ್ಕೆ ಇವ್ರು ಹಳ್ಳಾ ಹಿಡಿಸುದು ಗ್ಯಾರಂಟಿರಪ್ಪೋ!!!!!!!!

ನಮ್ಮ ಮಂದಿಯಿಂದ ನಮಗೆ ದ್ರೋಹ: ತಿಂದ ಮನಿಗೆ ಕಣ್ಣು ಹಾಕೋ ಜನ
ಈಗ ನೋಡ್ರಿ, ನಮ್ಮ ನಟ ಅಶೋಕ್ ನಾಯಕ್ತ್ವದಾಗ ಇವರೆಲ್ಲ ಸೇರಿ ಡಬ್ಬಿಂಗ್ ಬ್ಯಾಡ ಅಂತ ಮತ್ತ ತಮ್ಮ ಹಳೆ ಜಿದ್ದ  ಶುರು ಮಾಡ್ಯಾರ.ನಾನಂತೂ ಇವರ ವಿರುದ್ಧ ನನ್ನ ಹಕ್ಕಿನ ಪರವಾಗಿ ನಿಲ್ಲತಿನಿ.ಭಾಳ ವಿಚಾರ ಮಾಡಬ್ಯಾಡ್ರಿ , ಕನ್ನಡಕ್ಕೆ ದ್ರೋಹ ಬಗ್ಯಾರ ಜೊತೆ ಸೇರಿ ನಾಲ್ಕು ಮನೆ ಹಾಳು  ಮಾಡಿದ್ರೆ ಕೂಡಲ ಸಂಗಮ ದೇವ  ನಿಮ್ಮನ್ನ ಮೆಚ್ಚನ್ಗಿಲ್ಲ..ಹಂಗಾದ್ರೆ ಇದನ್ನ ಉಳಿಸಾಕ ನೀವು ನನ್ನ ಜೊತೆ ಹೆಜ್ಜೆ ಹಾಕ್ತಿರಿಲ್ಲ ಮತ್ತ?
ಎಲ್ಲರಿಗೂ ಅಡ್ಡ ಬಿದ್ದೆ.....
ನಿಮ್ಮ ದೋಸ್ತ
ಜಯತೀರ್ಥ