Friday, November 4, 2011

ಈ ದೀಪಾವಳಿ ನೀವು ದಿವಾಳಿ ಆಗ್ಲಿಲ್ಲ ತಾನೇ?




ನಮಸ್ಕಾರ ಕಣ್ರಪ್ಪ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ಅದೇನೋ ಇತ್ತೀಚಿಗೆ ಈ ಎಲ್ಲ ಪ್ಯಾಟೆ ಜನಗಳು ಬಂದು ಹ್ಯಾಪಿ ದಿವಾಳಿ ಹ್ಯಾಪಿ ದಿವಾಳಿ ಅಂತ ಕೈಕುಲ್ತವ್ರೆ.ಯಾಕಅಣ್ಣ   ಹಿಂಗೆ ಅಂದ್ರೆ ದೀಪಾವಳಿ ಸುಭಾಸಯನ ಪ್ಯಾಟೆಲಿ ಈ ರೀತಿ ಕಣ್ಲ ಹೇಳೋದು ಅಂತ ನಮ ಮುಖಕ್ಕೆ ತಿವಿತ ಇದ್ರೂ.ಅಲ್ಲಪ್ಪ ದೀಪಾವಳಿ ವರುಷಕ್ಕೊಮ್ಮೆ ಬರೊ ದೀಪದ ಹಬ್ಬ ನಮ್ಮ ನಾಡಿನ ಎಲ್ಲೆಡೆ ಸಂಭ್ರಮ ಖುಷಿಯಿಂದ ಆಚರಿಸ್ತವ್ರೆ,ಈ ನಡುವೆ ಯಾವ್ನಿಗಾದ್ರು ದಿವಾಳಿ ಆಗು ಅಂದ್ರೆ ಚೆಂದಕ್ ಇರ್ತದ ನೀವೇ ಹೇಳಿ! ಇಂಥ ಹಬ್ಬದಲ್ಲಿ ಇನ್ನೊಬ್ಬರಿಗೆ ಅದ್ಹೆಂಗ ರೀ ದಿವಾಳಿ ಆಗು ಅಂತ ಹೇಳೋಕೆ ಮನಸು ಬರ್ತದೆ? ಅಯ್ಯೋ ಅದು ಹಿಂದಿ ಜನ ದೀಪಾವಳಿಗೆ ದಿವಾಳಿ ಅಂತ ಕರಿತಾರೆ ಅಂತ ನಮ್ಮ ಬೋರನ ಮಗ ನಿಂಗ ಹೇಳ್ತಾ ಇದ್ದ, ಆಗ್ಲೇ ಶ್ಯಾನೆ ವಿಶಯ(ವಿಷ) ಎಲ್ಲ ಗೊತ್ತಾಗಿದ್ದು. ಈ ಟಿ.ವಿ. ನಲ್ಲೂ ಅದೆಸ್ಟೋ ಸಾರಿ ಹ್ಯಾಪಿ ದಿವಾಳಿ ಅನ್ನೋದು ಕಂಡಿದ್ದೆ,ಸುಮ್ನೆ ಅರ್ಥ ಆಗದೆ ದಿವಾಳಿ ಆಗೋದೇ ಸರಿ ಅಂತ ಸುಮ್ಮನಿದ್ದೆ.ನೀವು ನೋಡು ದಿನ ನಿತ್ಯದ ಎಲ್ಲ ಕೊಕ್ ನಿಂದ ಹಿಡಿದು ಕಾರ್ ಮಾರೋ  ಎಲ್ಲ ಕಂಪನಿಗಳು ಕನ್ನಡ ಗ್ರಾಹಕರಿಗೆ ದಿವಾಳಿ ಆಗಿ ಅಂತ ಶುಭ ಹಾರೈಸ್ತ ಅವ್ರೆ.ಕೇರಳ,ಆಂಧ್ರ,ತಮಿಳ್ ನಾಡಿನ ಆಭರಣ ಅಂಗಡಿಗಳು ಗುಜರಾತ್,ಮಹಾರಾಷ್ಟ್ರದ ಸಿಹಿತಿಂಡಿ ಮಾರಾಟಗಾರರು,ಡೆಲ್ಲಿ-ಪಂಜಾಬ್-ಕಲ್ಕತ್ತಾ ಮೂಲದ ಬಟ್ಟೆ ವ್ಯಾಪಾರಿಗಳೆಲ್ಲ ನಮಗೆ ಟೋಪಿ ಹಾಕಿ ಹ್ಯಾಪಿ ದಿವಾಳಿ ಅಂದ್ರೆ ನಮ್ಮ ಜನಗಳು ದಿವಾಳಿ ಎದ್ದ್ರು ಟೋಪಿ ಹಾಕಿಸ್ಕೊಂಡು ಸಂತೋಷದಿಂದ ಇರೋದು ನೋಡಿದ್ರೆ, ಕನ್ನಡಿಗರ ಮುಗ್ಧತೇನೋ ಅಥವಾ ಮೂಢತೆನೋ ಅಂತ ಅರ್ಥ ಆಗ್ತಿಲ್ಲವೇ! ನೂರ  ಕ್ಕೆ ನೂರು ಇದು ಮೂಢತನನೆ.
ನಾವೆನಪ್ಪ ಮಾಡುದು ನಮ್ಮ ಕೈಲಿ ಏನಿದೆ ಅಂತೀರಾ?

ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವೂ ಮುಂದೆ..ಅಂತ ನಮ್ಮ ರಾಜಣ್ಣ ಹೇಳಿದ್ದು ಮರೆತು ಹೋದ್ರ? ನೀವು ಇವತ್ತು ಕೊಕ್ ಖರಿದೀಸಿ ಅಥವಾ ಕಾರು ಹ್ಯಾಪಿ ದಿವಾಳಿ ಅಂದ್ರೆ ಅವರಿಗೆ ನೀವು ತಿಳಿ ಹೇಳಿ.ವಿವಿಧ ಕಂಪನಿಗಳ ಇಮೇಲ್,ಮಿಂಚೆ ವಿಳಾಸ ತಗೊಂಡು ಮಿಂಚೆ ಬರೆಯಿರಿ.ಕರ್ನಾಟಕದಲ್ಲಿ ದಿವಾಳಿ ಅನ್ನೋದು ತಪ್ಪು ಕಣ್ರೋ, ದೀಪಾವಳಿ ಅಂತ ಒತ್ತಿ ಹೇಳಿ.ಇನ್ನು ಹಲವಾರು  ಬ್ಯಾಂಕಿನವರು ತಮ್ಮ  ಖಾತೆದಾರರಿಗೆ  ಧನ ತ್ರಯೋದಶಿ ಗೆ "ಧನ ತೇರಸ್ " ಅಂತ ಹಿಂದಿಗರ ಹಬ್ಬದ ಬಗ್ಗೆ ಹೇಳಿ ಬಂಗಾರ ಕೊಳ್ಳೋಕೆ ಉತ್ತಮ ದಿವಸ ಅಂತ ಹಿಂದಿ ಹೇರೋಕೆ ಬರ್ತಾವ್ರೆ.ಈ ಬ್ಯಾಂಕ್ ನಲ್ಲಿರೋ ಅಧಿಕಾರಿಗಳಿಗೂ ಪತ್ರ ಬರೀರಿ,ಇಮೇಲ್ ಮಾಡಿ.
ನಾನಂತೂ ಅಕ್ಷಿಸ್ ಬ್ಯಾಂಕಿನ ಅಧಿಕಾರಿಗಳಿಗೆ ಮಿಂಚೆ ಬರೆದು ನನಗೆನು ಬೇಕು ಅದನ್ನ ಹೇಳಿಯೇ ಬಿಟ್ಟೆ ( ನಾನು ಬರೆದ ಪತ್ರದ ಪ್ರತಿ ಪಕ್ಕಕ್ಕೆ ಒಂದು ಚಿತ್ರ ಹಾಕೀನಿ-ವಸಿ ಜೂಮ್ ಮಾಡ್ಕೊಂಡು ನೋಡ್ಕೊಳ್ಳಿ).ಹಿಂಗೆ ಬಿಟ್ಟರೆ ಲಾಲೂ ಬಂದು ನಮ್ಮ ನೈಋತ್ಯ ರೈಲ್ವೇಲಿ ಬಿಹಾರಿಗಳನ್ನ ತುಂಬಿದಂಗೆ ಎಲ್ಲ ಹಿಂದಿ ಜನಗಳು ಬಂದು ಕನ್ನಡ ಅಚ್ಚ ನಹಿ, ಹಿಂದಿ ರಾಷ್ಟ್ರ ಭಾಷಾ ಅಂತ ಮೂರು ನಾಮ ಹಾಕಿ ನಮ್ಮನ್ನ ನಮ್ಮೂರಲ್ಲೇ ಪರದೇಶಿ ಮಾಡೋದು ದೂರ ಇಲ್ಲ ಹುಷಾರ್!

ದೀಪಾವಳಿ ನಿಮ್ಮ ಬಾ
  ಅಂಧಕಾರ ದೂರ ಮಾಡಲಿ,ರಾಜ್ಯೋತ್ಸವದ ಶುಭ ಹಾರೈಕೆಗಳೊಂದಿಗೆ,
ಜಯತೀರ್ಥ.

No comments:

Post a Comment