ನಿಜ ಅಲ್ವ? ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ಪಕ್ಷವಿದ್ದು ಕನ್ನಡನಾಡಿನ ಬಗ್ಗೆ ಹೋರಾಡಿದರೆ ಎಷ್ಟು ಒಳ್ಳೆಯದು ಒಂದ್ಸಲಿ ಯೋಚಿಸಿ.
ಪ್ರಾದೇಶಿಕ ಪಕ್ಷಗಳ ಅಲೆ-ಸ್ಥಳೀಯ ಮುಖಂಡರಿಗೆ ಬೆಲೆ :
ಕಳೆದ ೨ ವಾರಗಳ ಹಿಂದೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದು ಫಲಿತಾಂಶ ಎಲ್ಲರ ಮುಂದೆ ಇದೆ. ದೇಶದ ಅತಿ ದೊಡ್ಡ ರಾಜ್ಯವೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶಕ್ಕೆ ಯುವ ನಾಯಕ 'ಅಖಿಲೇಶ್ ಯಾದವ' ಆಯ್ಕೆಯಾಗಿ,ಸಣ್ಣ ವಯಸ್ಸಿನ ಮುಖ್ಯ ಮಂತ್ರಿ ಎನ್ನಿಸಿಕೊಂಡಿದ್ದಾರೆ.ಮಾಯಾವತಿಯ ವಜ್ರಮುಷ್ಟಿಯಲ್ಲಿದ್ದ ಉ.ಪ್ರ.ವನ್ನು ತಮ್ಮ ತೆಕ್ಕೆಗೆ ಒಲಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ಹರ-ಸಾಹಸವನ್ನೇ ಪಟ್ಟಿದ್ದವು.ಹಲವು ವರುಷಗಳಿಂದ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದೊಂಬರಾಟಕ್ಕೆ ಜನ ಮತ್ತೆ ಸೊಪ್ಪು ಹಾಕದೆ,ನಮ್ಮನ್ನು ಆಳಲು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ.ದೆಲ್ಹಿಯ ದಣಿಗಳು ಹೇಳಿದಂತೆ ಕುಣಿಯೋ ಮುಖ್ಯ ಮಂತ್ರಿ ಬೇಡೋ ಅನ್ನೋ ಉತ್ತರ ನೀಡಿದ್ದಾರೆ. ಇನ್ನು ಪಂಜಾಬಿ ಸರದಾರಗಳು ಕೂಡ "ಆಕಾಲಿ ದಳ"ಕ್ಕೆ ಮನ್ನಣೆ ನೀಡಿದ್ದಾರೆ.ಭಾ.ಜ.ಪ.ಕಾಂಗ್ರೆಸ್ಸ್ ಗಳು ಚಿಕ್ಕಪುಟ್ಟ ಗೋವ,ಮಣಿಪುರ ನಂಥ ರಾಜ್ಯಗಳನ್ನು ತಮ್ಮೆಡೆ ಉಳಿಸಿಕೊಂಡು ಹಾರಾಡುತ್ತಿವೆ.
ಕಳೆದ ಹಲವು ದಶಕಗಳಿಂದ ತಮಿಳುನಾಡು,ಕೇರಳ,ಒರಿಸ್ಸಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳೇ ಮುಂಚುಣಿಯಲ್ಲಿದ್ದು ಜನ ಪರತೆಯನ್ನು ಸಾರಿ ಹೇಳಿವೆ.ಪ್ರಜಾಪ್ರಭುತ್ವದ ನಿಜವಾದ ರೂಪವನ್ನು ಈ ರಾಜ್ಯಗಳ ಜನತೆ ಭಾರತಕ್ಕೆ ತೋರಿಸಿ ಕೊಟ್ಟಿದ್ದಾರೆ.ತಮಿಳುನಾಡಿನಲ್ಲನ್ತು ಡಿ.ಎಂ.ಕೆ ,ಎ.ಆಯ.ಎ .ಡಿ.ಎಂ.ಕೆ,ಪೀ.ಎಂ.ಕೆ ಎಂಬ ಸ್ಥಳೀಯ ಪಕ್ಷಗಳೇ ಹೆಚ್ಚು ಜನಮನದಲ್ಲಿದ್ದು,ಬೇರೆ ದೆಲ್ಲಿಯಲ್ಲಿ ಕೇಂದ್ರ-ಕಛೇರಿಯನ್ನು ಹೊಂದಿದ ಪಕ್ಷಗಳಿಗೆ ನೆಲೆ ಕಾಣಲು ಬಿಟ್ಟಿಲ್ಲ.ಜಯಲಲಿತಾ ಮತ್ತು ಕರುಣಾ ನಿಧಿ ಇವರದೇ ಅಟ್ಟಹಾಸ. ಪಕ್ಕದ ಮಹಾರಾಷ್ಟ್ರದಲ್ಲಿ ಮುದಿ ಗೂಬೆ ಬಾಳ-ಟಾಕರೆ ಶಿವಸೇನೆ, ಶರದ್ ಪವಾರ್ ರ ರಾಷ್ಟ್ರವಾದಿ ಕಾಂಗ್ರೆಸ್ಸ್ ಗಳು ಹೆಚ್ಚು ಜನ ಪ್ರಿಯ. ಒರಿಸ್ಸಾದಲ್ಲಿ ಬಿಜು ಜನತಾದಳ ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದ ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಹುಟ್ಟೇ-ಅಡಗಿದಂತೆ ಆಗಿದೆ. ಇದೆ ಪಟ್ಟಿಗೆ ನೀವು ಪಶ್ಚಿಮ-ಬಂಗಾಳವನ್ನು ಸೇರಿಸಬಹುದು.ಮಮತಾ ಬ್ಯಾನೆರ್ಜಿ ನೇತ್ರತ್ವದ ತೃಣಮೂಲ ಬಹುದಿನದಿಂದ ನಡೆಯುತ್ತಿದ್ದ ಕಮ್ಯುನಿಸ್ಟರಿಗೆ ಗೇಟ್ ಪಾಸ್ ನೀಡಿದ್ದಲ್ಲದೆ,ಇತರೆ ಪಕ್ಷಗಳನ್ನು ತೃಣ ಸಮ ಮಾಡಿದೆ. ಆಂಧ್ರದಲ್ಲಿಯೂ ಚಂದ್ರ ಬಾಬು ನಾಯಿಡು ರವರ ಟಿ.ಡಿ.ಪಿ ಮತ್ತೊಬ್ಬ ಚಂದ್ರ ಶೇಕರ ರಾವ್ ರವರ ಟಿ.ಆರ್.ಎಸ್ ಸ್ಥಳೀಯ ಕೇಂದ್ರಿಕ್ರುತವಾಗಿದ್ದು.ಟಿ.ಡಿ.ಪಿ.ಗೆ ಈ ಮುಂಚೆ ಅಧಿಕಾರದ ಗದ್ದುಗೆಯನ್ನು ಆಂಧ್ರದ ಜನತೆ ನೀಡಿದ್ದರು.
ಗುಜರಾತ್ ರಾಜ್ಯದಲ್ಲಿ ಭಾ.ಜ.ಪ ಆಡಳಿತದಲ್ಲಿದ್ರು ನರೇಂದ್ರ ಮೋದಿ ಗುಜರಾತಿ ಜನಪರ ಕಾರ್ಯಗಳಿಂದಲೇ ಗೆದ್ದಿದ್ದು ಎಲ್ಲರಿಗು ಗೊತ್ತಿದ್ದ ವಿಚಾರ.ಈಶಾನ್ಯ ರಾಜ್ಯಗಳಲ್ಲಿ ಆಸಂ ಗಣ ಪರಿಷದ,ಸಿಕ್ಕಿಂ-ಡೆಮಾಕ್ರಟಿಕ್ ಫ್ರಂಟ್,ಮೆಘಾಲಯ-ನ್ಯಾಷನಲ್ ಕಾಂಗ್ರೆಸ್ಸ್ ನಂಥ ಹಲವಾರು ಸ್ಥಳೀಯ ಪಕ್ಷಗಳು ಪ್ರಚಲಿತದಲ್ಲಿದ್ದು ತಮ್ಮ ಜನರಿಗಾಗಿ ಕೆಲಸ ಮಾಡುತ್ತಿವೆ.
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲೆಮ್ಮು?
ಕರುನಾಡಿನಲ್ಲಿ ಮಾತ್ರ ಯಾಕೆ ಹೀಗೆ ಅಂತ ನಮ್ಮೆಲ್ಲರ ಪ್ರಶ್ನೆ ಅಲ್ಲವೇ? ತಲೆ -ತಲಾಂತರದಿಂದ ನಮ್ಮಲ್ಲಿ ನಾಯಕರುಗಳು ಕಾಂಗ್ರೆಸ್ಸ್ ಅಥವಾ ಭಾ.ಜ.ಪ ಎರಡೇ ಪಕ್ಷಗಳು ರಾಜ್ಯಕ್ಕೆ ಅನ್ನೋ ದುರ್ವಿಚಾರದಿಂದ ನಾಡಿಗೆ ದ್ರೋಹವಾಗಿದೆ.ಹಲವು ವರುಷಗಳಿಂದ ಬಹುತೇಕ ನಡೆಯುವ ಚುನಾವಣೆಗಳಲ್ಲಿ ಇವೆರಡೆ ಪಕ್ಷಗಳು ಬಹುಪಾಲು ಯಶಸ್ಸು ಕಂಡಿದ್ದು,ಸ್ಥಳೀಯ ಪಕ್ಷಗಳನ್ನ ಬೆಳೆಯದಂತೆ ನೋಡಿ ಕೊಂಡಿವೆ. ಒಂದು-ಕಾಲದಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿ ನಾಡಿನ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗ್ಡೆ ರವರು ಹುಟ್ಟುಹಾಕಿದ ಜನತಾ-ದಳ ಬಹಳಷ್ಟು ಕಷ್ಟದಲಿ ಸಿಲುಕಿ ಅಂತರ್-ಜಗಳದಿಂದ ಒಡೆದು ನುಚ್ಚು ನೂರಾಗಿ ಗೌಡರ ಪಾಲಾಯಿತು.ಇಗ ಅದು ಬರಿ ಮಣ್ಣಿನ ಮಕ್ಕಳ ಅಲ್ಲಲ್ಲ ದೇವೇಗೌಡರ ಮಕ್ಕಳ ಪಕ್ಷವಾಗಿ ಬೆಳೆದಿದೆ.ದಕ್ಷಿಣ ಭಾರತದಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಬಿಗಿದ ಭಾರತಿಯ ಜನತಾ ಪಾರ್ಟಿ ಎಷ್ಟರ ಮಟ್ಟಿಗೆ ಕನ್ನಡಪರ,ಕರ್ನಾಟಕದ ಜನತೆಯ ಪರ ಎಂಬುದು ಈಗಾಗಲೇ ತೋರಿಸಿ ಕೊಟ್ಟಿದೆ!!ಬೆಳಗಾವಿ ವಿಷಯ ಬಂದರೆ ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಶಿವಸೇನೆಗೆ ತಾಳ ಹಾಕುತ್ತ,ಕನ್ನಡ ವಿರೋಧಿ ಪಕ್ಷಗಳೊಡನೆ ಬೆರೆಯುತ್ತಾ ನಾಡ-ದ್ರೋಹಬಗೆಯುತ್ತಿದೆ. ಅಷ್ಟೇ ಅಲ್ಲದೆ ರಾಜ್ಯಸಭೆಗೆ ಕನ್ನಡ ಅಭ್ಯರ್ಥಿಗಳನ್ನು ಕಳಿಸದೇ ನೆರೆಯ ವೆಂಕಯ್ಯ,ರಾಜಕೀಯದ ಗಂಧ ಗಾಳಿ ಗೊತ್ತಿರದ ಹೇಮಾ-ಮಾಲಿನಿರನ್ನು ಆಯ್ಕೆ ಮಾಡಿ ಕನ್ನಡಿಗರ ಹಿನ್ನೆಡೆಗೆ ನಾಂದಿ ಹಾಡಿದೆ.ಕಾಂಗ್ರೆಸ್ಸ್ ಅಧಿಕಾರಾವಧಿಯಲ್ಲೂ ರಾಜ್ಯದ ಹಿತಾಸಕ್ತಿಗೆ ಬೆಂಕಿ ಬಿದ್ದಿದ್ದೆ ಹೆಚ್ಚು.
ಹೈ ಕಮಾಂಡ್ ಎಂಬ ಬೆದರು ಬೊಂಬೆ:
ಪ್ರಜಾಪ್ರಭುತ್ವದಲ್ಲಿ ನಾವುಗಳು ಆರಿಸಿದ ಜನಪ್ರತಿನಿಧಿಗಳೆಂದು ಕರೆಸಿಕೊಳ್ಳೋ ಅಭ್ಯರ್ಥಿಗಳು ನಮ್ಮ ರಾಜ್ಯವನ್ನು ಆಳಬೇಕು ಆವಾಗಲೇ ಜನತೆಯ ಆಯ್ಕೆಗೆ ಮನ್ನಣೆ ದೊರೆತಂತೆ. ಉಸಿರಾಡಲು ಕೂಡ ಅಪ್ಪಣೆ ಪಡೆಯಲು ಡೆಲ್ಲಿಗೆ ನಮ್ಮ ನಾಯಕರು ಹೋಗಬೇಕು? ಇದೆ ರೀ ಹಾಯ್-ಕಮಾಂಡ್ ರಾಜಕಾರಣ ಅನ್ನೋದು.ಗ್ರಾಮ-ಪಂಚಾಯ್ತಿ,ಪುರ-ಸಭೆಯಿಂದ ಹಿಡಿದು ಲೋಕಸಭೆ,ರಾಜ್ಯಸಭೆಗೆ ಆಯ್ಕೆಯಾಗೋ ಅಭ್ಯರ್ಥಿಗಳನ್ನು ಡೆಲ್ಲಿಯಲ್ಲಿ ಕುಳಿತಿರುವ ರಾಜಕಾರಣಿಗಳು ನಿರ್ಧಾರ ಮಾಡೋದು ಅಂದ್ರೆ ಏನು ಅರ್ಥ? ನಾವು ಚುನಾಯಿಸಿದ ಜನರಿಗೆ ಯಾವುದೇ "ಪವರ್" ಇಲ್ಲದೆ ಪ್ರವರ ಕಳೆದು ಕೊಳ್ಳಬೇಕೆ? ಪಕ್ಷದಲ್ಲಿ ಭಿನ್ನಮತದ ಶಮನಕ್ಕು ಇವರೇ ಬೇಕು, ಸಿ.ಎಂ ಆಯ್ಕೆಗೂ ಇವರೇ ಸೈ ಅನ್ನಬೇಕು! ಇದ್ಯಾವ ಸೀಮೆಯ ಪ್ರಜಾ-ಪ್ರಭುತ್ವ ಅನ್ನೋದು ದಿಲ್ಲಿಯ ದೊರೆಗಳು ಸ್ಪಷ್ಟ ಪಡಿಸಬೇಕಾಗಿದೆ? ಇದರಿಂದ ರಾಜ್ಯದ ಬೆಳವಣಿಗೆ ಕುಂಠಿತ ಗೊಂಡಿದೆ.
ಕರ್ನಾಟಕ ಇಂದು ಎದುರಿಸುತ್ತಿರವ ನದಿ,ಗಡಿ,ಅಥವಾ ನಮ್ಮ ಇತರೆ ಸಮಸ್ಯೆಗಳಿಗೆ ಎಂದಿಗೂ ನ್ಯಾಯ ಸಿಕ್ಕಿಲ್ಲ.ಹಲವು ನಾಯಕರು ಬದಲಾದರೆ ಹೊರತು ಅಕ್ಕ-ಪಕ್ಕದ ರಾಜ್ಯಗಳೊಂದಿಗೆ ಅಂಟಿಕೊಂಡಿರುವ ಸಮಸ್ಯೆಗಳ ಪರಿಹರಿಸಲು ಯಾವ ಹೈ-ಕಮಾಂಡ್ ಮುಂದೆ ಬರಲೇ ಇಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಲು ನ್ಯಾಯಯುತವಾದ ರಾಜ್ಯದ ನಡೆಗಳನ್ನು ವಿರೋಧಿಸದರೆ ಹೊರತು ಕನ್ನಡಿಗರ ಪರ ನಿಲ್ಲಲಿಲ್ಲ. ಅಸ್ತಿತ್ವ ಹೊಂದಿರುವ ರಾಜ್ಯದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು, ಅಸ್ತಿತ್ವ ಇರದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಮ್ಮ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟರೆ ಹೊರತು ಜನರಂದು ಕೊಂಡಂತೆ ನಡೆಯಲಿಲ್ಲ.ಕಾವೇರಿ ನದಿ ವಿಚಾರ ದಲ್ಲಿ ವಾಜಪೈ ಸರ್ಕಾರ ತಮಿಳುನಾಡಿಗೆ ಸೈ ಅಂದರೆ, ಎಸ್.ಎಂ.ಕೃಷ್ಣ ,ಯಡಿಯೂರಪ್ಪ ಸರಕಾರಗಳು ಕೃಷ್ಣ ನದಿ ನೀರಿನ ಹಕ್ಕಿಗಾಗಿ ಹೋರಾಡದೆ ಹೈ-ಕಮಾಂಡ್ ಆದೇಶವನ್ನು ಚಾಚು ತಪ್ಪದೆ ಪಾಲಿಸಿದವು.ಕೆಲಸವಿಲ್ಲದೆ ಗಡಿ ತಂಟೆಗೆ ಮಹಾರಾಷ್ಟ್ರ ಮುಂದಾದಗ್ಲು ಭಾ.ಜ.ಪ ಶಿವಸೇನೆ ತಾಳಕ್ಕೆ ಕುಣಿದರೆ,ಕಾಂಗ್ರೆಸ್ಸು ಹೈ-ಕಮಾಂಡ್ ಮಾತಿಗೆ ಓಗೊಟ್ಟು ಮೌನಕ್ಕೆ ಶರಣಾಯಿತು.ನಮ್ಮ ಬಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ದೊರೆಕಿಸಲು ತಂಟೆ ಮಾಡಿದ ತಮಿಳರಿಗೂ ದಿಲ್ಲಿಯ ದೊರೆಗಳು ಹೌದು ಎಂದರು.
ಆಗಬೇಕಾಗಿರೋದು ಏನು?
ಸದ್ಯಕ್ಕೆ ರಾಜ್ಯದಲ್ಲಿ ಇರೋ ಗಡಿ,ನದಿ,ವಲಸೆ,ಉದ್ಯೋಗ ಮುಂತಾದ ಸಮಸ್ಯೆಗಳಿಗೆ ಕನ್ನಡಪರ ಸಂಘಟನೆಗಳಾದ ಕ.ರ.ವೇ,ಜಯ-ಕರ್ನಾಟಕ,ವಾಟಾಳ್ ಪಕ್ಷದತ್ತ ಜನ ಹೋಗಬೇಕಾಗಿದೆ. ಎಷ್ಟೇ ಆದರು ಇವು ಸಂಘಟನೆಗಳು-ಬರಿ ಹೋರಾಟ ಮಾತ್ರ ಸಾಧ್ಯ. ಅಷ್ಟಾಗಿಯೂ ಕ.ರ.ವೇ ಯಂತಹ ಸಂಘಟನೆಗಳು ರಾಜ್ಯದ ಪರ ನಿಂತಿವೆ,ಉತ್ತರ ಕರ್ನಾಟಕದಲ್ಲಿ ನೆರೆ ಮತ್ತಿತರೇ ಕಷ್ಟ ಉಂಟಾದಾಗ ಜನರಿಗೆ ಸಹಾಯಮಾಡಿದ್ದು ಎಲ್ಲರಿಗೂ ಗೊತ್ತಿದ ವಿಚಾರ.ಇವುಗಳು ಪಕ್ಷಗಳಾಗಿ ಅಧಿಕಾರಕ್ಕೆ ಬಂದಾಗಲೇ ನಮ್ಮಲ್ಲಿರೋ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಗಳು ಆರಂಭಗೊಳ್ಳುವವು.ಲೋಕಸಭೆಯಲ್ಲಿ ನಮ್ಮ ಅಹವಾಲುಗಳನ್ನು ಕೇಂದ್ರ-ಸರಕಾರ ಕೇಳಿ ಬಗೆಹರಿಸುವತ್ತ ಚಿತ್ತಕೊಡುವುದು.ಪ್ರತಿಬಾರಿಯ ರೈಲ್ವೆ ಬಜೆಟ್ ನಲ್ಲಿ ಚೊಂಬು ನೀಡುವ ರೈಲ್ವೆ ಸಚಿವರುಗಳು ರಾಜ್ಯದ ಒಳ-ನಾಡಿಗೆ ಅನುಕೂಲವಾಗುವಂತೆ ಹೊಸ ರೈಲು ಬಿಡುವರು.ರಾಜ್ಯದ ವಿಚಾರದಲ್ಲಿ ತಮಿಳುನಾಡು,ಮಹಾರಾಷ್ಟ್ರ,ಆಂಧ್ರ ಪರ ನ್ಯಾಯ ನೀಡುವ ಕೇಂದ್ರ-ಸರಕಾರ ಬದಲಾಗುವುದು.ಇವೆಲ್ಲ ಆಗಬೇಕಾದರೆ ಸ್ಥಳೀಯ ಜನರ ಕೇಂದ್ರಿಕೃತ ಪಕ್ಷದ ಉದಯವಾಗಬೇಕಿದೆ,ಜನತೆಯು ಇದರತ್ತ ಮುಖ ಮಾಡಬೇಕಿದೆ.ಇಂದಿನ ಹೊಸ ಯುಗಾದಿ ,ಹೊಸ ವರುಷಕ್ಕೆ ಕನ್ನಡಿಗರ ಯೋಚನಾ ಲಹರಿಯನ್ನು ಬದಲಾಯಿಸಿ ಹೊಸ ಕನ್ನಡ ಪಕ್ಷಕ್ಕೆ ಸ್ವಾಗತ ಮಾಡಲಿ.ಬರಿ ಬೆವನ್ನೇ ತಿಂದಿರುವ ಜನತೆಗೆ ಬೆಲ್ಲದ ಸವಿಯು ಬರಲಿ.
ಅಂತಿಮ ಲಹರಿ:
ಆರ್.ಎಸ್.ಎಸ್ ನ ಹಿರಿಯ ನಾಯಕ ಸುರೇಶ ಜೋಷಿ ಅವರು ಮೊನ್ನೆ ಹೇಳಿದ್ದು ನೋಡಿ-ಸ್ಥಳೀಯ /ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ದೇಶದ ಚಿಂತೆಗೆ ಕಾರಣವಂತೆ.ಸಂಘ-ಪರಿವಾರದ ಈ ಅಧಿಕಾರದ ದುರಾಸೆಯ ಶಿಸ್ತು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ. ಕರ್ನಾಟಕದಂತೆ ಎಲ್ಲ ರಾಜ್ಯಗಳು ಕೂಡಿದ್ರೆನೆ ಈ ದೇಶ ಅನ್ನೋದನ್ನ ಇಂಥವರು ಮನಗಾಣಬೇಕಿದೆ.ಇಲ್ಲದೆ ಹೋದಲ್ಲಿ ಪ್ರತಿ-ರಾಜ್ಯದಲ್ಲಿ ಸ್ಥಳೀಯ ನಾಯಕತ್ವ ಪಡೆಯಲು ಶಾಸಕ,ಸಚಿವರುಗಳು ರೆಸಾರ್ಟ್ ರಾಜಕಾರಣ ಮಾಡಬೇಕಾಗುವುದು.
No comments:
Post a Comment