
ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ನಮ್ಮ ಕಣ್ಣಿಗೆ ಸುಣ್ಣ ಹಾಕಲಾ ಕತ್ತಾರ :
ನಮ್ಮ ಕೆ.ಎಫ್.ಆಯ ನೋಡ್ರಿ ಹಿಂದೆ ಮುಂದೆ ನೋಡದೆ ಡಬ್ಬಿಂಗ್ ಬ್ಯಾಡ್ರೋ ಬ್ಯಾಡ್ರೋ ಅಂತ ಹೊಯ್ಕೋಳ ಕತ್ತ್ಯಾರು,ಸಾಮಾನ್ಯ ಮಂದಿ ನಾವು ಮಾಡುವಸ್ಟು ವಿಚಾರರೆ ಇವರ ಮಾಡ್ತಾರ,ಅದೇನೋ ಅಪ್ಪ ಹಾಕಿದ ಆಲದ ಮರ ಅಂತ ಹೇಳಿ ಅದನ್ನ ಕಂಟಿನ್ಯೂ ಮಾಡಿದ್ರೆ ಹೆಂಗ್ ನಡಿಬೇಕ್ರಿ ಬಾಳೇ? ಈಗ ಜಗತ್ತು ಭಾಳ ಮುಂದು ಹೊಗೈತಿರಿ..ನಾವು ಬೇರೆ ಭಾಷೆ ಸಿನೆಮಾನ ಕನ್ನಡದಾಗ ಡಬ್ಬ ಮಾಡಿದ್ರೆ ನಮ್ಮ ಮಂದಿಗೆ ಕೆಲಸ ಸಿಗತಾವು, ಸಿನೆಮಾ ನಂಬಿ ಬದ್ಕೋ ಎಷ್ಟು ಕುಟುಂಬಗಳು ೨ ಹೊತ್ತು ಚಂದಂಗ ಊಟ ಮಾಡ್ತಾರೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಕನ್ನಡದಾಗೆ ಕಾರ್ಟೂನ್,ಡಿಸ್ಕಾವೆರಿ,ಅನಿಮಲ್ ಪ್ಲಾನೆಟ್,ಪೋಗೋ ಎಲ್ಲ ನೋಡ್ತಾರೆ. ದೂರದ ಬೆಟ್ಟ ಕಣ್ಣಿಗೆ ಸಣ್ಣಗೆ ಚಂದಂಗೆ ಕಾಣತೈತಿ ಅಂತ ಅದನ್ನ ದೂರಿಂದ ನೋಡಿದ್ರೆ ಏನು ಲಾಭ ಇಲ್ಲ್ರಿ,ಬೆಟ್ಟ ಹತ್ತಿ ಅದರ ಮಜಾ ತಗೋಬೇಕು ಅಂದ್ರೆ ನಾವು ಬೆಟ್ಟ ಹತ್ತಾಕ ಬೇಕು! ಇದೆ ರೀತಿ ನಮ್ಮ ಕನ್ನಡ ಸಿನಿಮಾ ಮಂದಿ ದೂರ ದಿಂದ ನೋಡಿ ಡಬ್ಬಿಂಗ್ ಬ್ಯಾಡ, ಅದರಿಂದ ನಮ್ಮ ಜನಕ್ಕೆ ಹಾಳು ಅಂತ ಸುಳ್ಳು ವಾದಿಸಾಕತ್ತ್ಯಾರು! ಇಂಥ ಮೂರ್ಖರಿಗೆ ನಮಂಥ ಕಲಿತ ಮಂದಿ ಬುದ್ಧಿ ಹೇಳಿ ನಮಗೆ ಏನೋ ಬೇಕಾದ್ದು ನಾವು ಆರಿಸ್ಕೊತಿವಿ, ನಿಮ್ಮ ಬದಕು ಹಸನ ಮಾಡ್ತಿವಿ ಅಂದ್ರೆ, ಇವರು ಒಪ್ಪಬೇಕ್ರಿ ಸರ್.ನನಗು ಮಿಶನ್ ಇಮ್ಪೋಸಿಬಲ್ ಅನ್ನೋ ಫಿಲ್ಮದಾಗ ಅದನ ನೋಡ್ರಿ ಟಾಮ್ ಕ್ರೂಇಸ್ ಅವನ್ನ ಸಿನಿಮಾ ಕನ್ನಡದಾಗ ನೋಡ್ಬೇಕು ಭಾಳ ಆಶಾ ಐತಿ, ಆದರ ನೋಡ್ರಿ ಎಂಥ ಜನ ನಮಗೆ ಏನು ಬೇಕೋ ಅದನ್ನ ನೋಡಾಕ ಬಿಡವಲ್ಲರು. ಸಣ್ಣವರು ಇದ್ದಗಿಂದ ನಮ್ಮ ಕನ್ನಡ ಸಾಲಿ ಮಾಸ್ತರು ಹೇಳ್ತಿದ್ರು " ಗ್ರಾಹಕನೇ ರಾಜ, ಗ್ರಾಹಕ ಹೇಳಿದಂಗೆ ವ್ಯಾಪಾರಿ ಕೇಳಬೇಕು, ಅವನಿಗೆ ಏನು ಬೇಕೋ ಅದನ್ನ ನಾವು ಕೊಡಬೇಕಂತ" , ಆದ್ರ ನಮ್ಮ ಕೆ,ಎಫ್.ಆಯ ನೀತಿ ನೋಡಿದ್ರೆ ಇದಕ್ಕ ತದ್ವಿರುದ್ಧ ನಡೆದುಕೊಂಡು ನಮಗೆ ದ್ರೋಹ ಬಗ್ಯಾಕತ್ತದ. ಇದನ್ನ ಮುಂದವರೆಸಿದ್ರ ನಮ್ಮ ಜನಕ್ಕೆ ಇವ್ರು ಹಳ್ಳಾ ಹಿಡಿಸುದು ಗ್ಯಾರಂಟಿರಪ್ಪೋ!!!!!!!!
ನಮ್ಮ ಮಂದಿಯಿಂದ ನಮಗೆ ದ್ರೋಹ: ತಿಂದ ಮನಿಗೆ ಕಣ್ಣು ಹಾಕೋ ಜನ
ಈಗ ನೋಡ್ರಿ, ನಮ್ಮ ನಟ ಅಶೋಕ್ ನಾಯಕ್ತ್ವದಾಗ ಇವರೆಲ್ಲ ಸೇರಿ ಡಬ್ಬಿಂಗ್ ಬ್ಯಾಡ ಅಂತ ಮತ್ತ ತಮ್ಮ ಹಳೆ ಜಿದ್ದ ಶುರು ಮಾಡ್ಯಾರ.ನಾನಂತೂ ಇವರ ವಿರುದ್ಧ ನನ್ನ ಹಕ್ಕಿನ ಪರವಾಗಿ ನಿಲ್ಲತಿನಿ.ಭಾಳ ವಿಚಾರ ಮಾಡಬ್ಯಾಡ್ರಿ , ಕನ್ನಡಕ್ಕೆ ದ್ರೋಹ ಬಗ್ಯಾರ ಜೊತೆ ಸೇರಿ ನಾಲ್ಕು ಮನೆ ಹಾಳು ಮಾಡಿದ್ರೆ ಕೂಡಲ ಸಂಗಮ ದೇವ ನಿಮ್ಮನ್ನ ಮೆಚ್ಚನ್ಗಿಲ್ಲ..ಹಂಗಾದ್ರೆ ಇದನ್ನ ಉಳಿಸಾಕ ನೀವು ನನ್ನ ಜೊತೆ ಹೆಜ್ಜೆ ಹಾಕ್ತಿರಿಲ್ಲ ಮತ್ತ?
ಎಲ್ಲರಿಗೂ ಅಡ್ಡ ಬಿದ್ದೆ.....
ನಿಮ್ಮ ದೋಸ್ತ
ಜಯತೀರ್ಥ
ತುಂಬಾ ಚೆನ್ನಾಗಿದೆ.,ನಮ್ಮ ಮಂದಿಯಿಂದ ನಮಗೆ ದ್ರೋಹ.
ReplyDeleteಡಬ್ಬಿಂಗ ಬೇಕೇ ಬೇಕು ! ಅವಾಗಲೇ ಕನ್ನಡದಲ್ಲಿ ಸ್ಪರ್ಧಾತ್ಮಕತೆ ಬೆಳೆಯುತ್ತೆ ಮತ್ತು ನಮಗೆ ಬೇರೆಯವರಿಂದ ಆಗುತ್ತಿರುವ ಅವಮಾನ ತಪ್ಪುತ್ತೆ ! ಯಾಕೆಂದರೆ ಕನ್ನಡ ಚಿತ್ರಗಳೆಂದರೆ ರಿಮಕೆ ಚಿತ್ರಗಳು ಅನ್ನೋ ಬ್ರಾಂಡ್ ಆಗಿಬಿಟ್ಟಿದೆ :(
ReplyDeleteಗೌಡ್ರೆ ಚೆಲೋ ಬರದಿರೀ ...
ಚೆನ್ನಾಗಿದೆ ನಿಮ್ಮ ಲೇಖನ....
ReplyDeleteDhanyavaadagalu-Raghavendra,Prashant Mattu Anand.
ReplyDeleteJayatheerth avare nimma lekhana chennagide,
ReplyDeleteJai Karnataka
By Mallikarjun