Saturday, July 23, 2011

ಸಿಂಹ ಬೊಗಳತ್ತಂತೆ ನೋಡ್ರಪ?

ಎನ್ರಪ, ಎಲ್ಲಾರೂ ಹೆಂಗದಿರಿ?
 ಅದ್ಯಾವನೋ ರೋಹಿತ್ ಶೆಟ್ಟಿ ಅಂದ್ರೆ? ಹೆಸರು ನೋಡಿದ್ರೆ ಒಳ್ಳೆಯ ಕರಾವಳಿ ಕನ್ನಡಿಗ ಇದ್ದಂಗ ಅನಿಸತೈತಿ, ಮಾಡ್ತಾ ಇರೋ ಕೆಲಸ ನೋಡಿದ್ರೆ ಕನ್ನಡಿಗರೇ ಎಕ್ಕಡ ತಗೊಂಡು ಹೊಡ್ಯೋ ಹಂತ ಕೆಲಸ ಮಾಡ್ತಾನಲ್ರೋಪ. ಈ ತರಹ ಸುದ್ದಿ ಚರ್ಚೆ ನಿನ್ನೆ ನಮ್ಮ ಬಿಜಾಪುರ,ಬೀದರ,ಬೆಳಗಾವಿ, ಹುಬ್ಬಳ್ಳಿ ಎಲ್ಲ ಕಡೆ ಸಾಮಾನ್ಯ ವಾಗಿದ್ದು.
ಸುದ್ದಿ ಏನು ಅಂತ ಹೇಳೋದೇ ಮರೆತೇ ನೋಡಿ: 'ಸಿನ್ಘಂ'ಅಂತ ಒಂದು ಹಿಂದಿ ಚಿತ್ರ ಮೊನ್ನಿ ಶುಕ್ರವಾರ ಎಲ್ಲ ಕಡೆ ಬಿಡುಗಡೆ ಮಾಡ್ಯಾರ.ಅದರೋಳಾಗ ಮತ್ತೊಬ್ಬ ಕನ್ನಡಿಗ ಪ್ರಕಾಶ ರೈ ಮತ್ತು ಹೀರೋ ಅಜಯ ದೆವ್ಗುನ್ ನಡುವಿನ ಡೈಲಾಗ್ ದಾಗ ಕರ್ನಾಟಕದ ಸೀಮ್ಯಗಿಂದ ಜನ ಕರ್ಕೊಂಡು ಬಂದು ನಿಂಗ ಹೊಡ್ತಿನೋ ಮಗನೆ ಅಂತ ಪ್ರಕಾಶ್ ರೈ ಹೇಳಿದ್ರೆ,ಅಜಯ ನೀವು ಕನ್ನಡ ಮಂದಿ ನಾಯಿ ಇದ್ದಂಗ.ನಿಮ್ಮಂಥ ನಾಯಿಗೋಳಿಗೆ ನಾನೊಬ್ಬ ಸಾಕು ಅಂತ ಹೇಳ್ತಾನ.

ಉಂಡ ಮನಿಗೆ ದ್ರೋಹ ಬಗಿಯೋ ಗಂಡೆದೆ ಇಲ್ಲದ ಪುಂಡರನ್ನು ಜೀವ ಹಿಂಡೆನ್ದ ಪರಮಾತ್ಮ:

ಇಂಥ ಘಟನೆ ನಡೀಲಿ ಕತ್ತಿರೋದು ಇದೆ ಮೊದಲಲ್ಲರಿ. ನಮ್ಮ ಊರಾಗ ಬಂದು ನಮ್ಮ ಮನ್ಯಾಗ ತಿಂದು ನಮಗೆ ಬೈದು ಹೋಗು ನಾಯಿ ಜಾತಿ ಜನ ಬಹಳಷ್ಟು ಹುಟ್ಟಕೊಂಡಾರ್. ಅಲ್ಲಲ್ಲ ನಾಯಿ ಜಾತಿ ಅಲ್ಲ, ನಾಯಿನೂ ಇವರಿಗಿಂತ ನಿಯತ್ತಿಂದು ಪಾಪ ಅದರ ಕಿಮ್ಮತ್ತು ಕಮ್ಮಿ ಆದೀತು. ಇವರೆಲ್ಲ ನಾಯಿಗಿಂತ ಕಡೆ.ಈ ಮೊದಲು ಕೇಂದ್ರ ರೈಲ್ವೆ ಮಂತ್ರಿ ಇದ್ದನಲ ಅದೇ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಂತೆ ಇರುವ ಲಾಲೂ ಪ್ರಸಾದ ಯಾದವ್, ಈ ಮಗ ನಮಗೆ ಕಚಡಾಗಳು ಅಂತ ಕರ್ನಾಟಕಕ್ಕೆ ಬಂದಾಗ ಬೈದು ಹೋಗಿದ್ದ.ಬರಿ ತಮ್ಮ ಬಿಹಾರಿ ಬಾಬುಗಳನ್ನೇ ನಮ್ಮ ಹುಬ್ಬಳ್ಳಿ  ನೈಋತ್ಯ ರೈಲ್ವೆ ತುಂಬಾ ತುಂಬಿ, ತಮ್ಮ ತವರಿನಲ್ಲಿ ಕೆಲಸ ಇಲ್ಲದೆ ನಾವೇ ತಬ್ಬಲಿ ಆಗೋ ಹಂಗ ಮಾಡಿದ ಕೀರ್ತಿ ಈ ಮಹಾಶಯನಿಗೆ ಹೋಗ್ಬೇಕು.
ಇನ್ನ್ನೊಬ್ಬ ಇಲ್ಲೇ ಮಗ್ಗಲ ಮುಳ್ಳು , ಅದೇ ರೀ ರಜನಿಕಾಂತ!! ಈ ಸಾಹೇಬ್ರೆ ಕಾವೇರಿ ವಿವಾದ ಆದಾಗ ಕನ್ನಡಿಗರಿಗೆ ಒದ್ದರೆ ಚಲೋ ಇರ್ತದ ಅಂತ ಓದರಕೊಂಡು, ತನ್ನ ಚಿತ್ರ ಕನ್ನಡ ನಾಡಿನಾಗ ಬಿಡುಗಡೆ ಆಗುಮುಂದ ಬಾಲ ಸುಟ್ಟ ಬೆಕ್ಕಿನಂತೆ ಕ್ಷಮಾಪಣೆ ನಾಟಕ ಮಾಡಿದ್ರು. ಇವ್ರು ಏನು ಕಮ್ಮಿ ಇಲ್ಲ, ಬೆಂಗಳೂರಿನಾಗ ಹುಟ್ಟಿ ಬೆಳೆದು ಕಾವೇರಿ ನೀರು ಕುಡಿದು, ತಮಿಳನ್ಯಾಗ ಕೀರ್ತಿ ಗಳಿಸಿ,ಸಾಕಿದ ತಾಯಿಗೆ ಒದ್ದು ಓಡಿ ಹೋಗು ಚಿಲ್ಲರ ಬುದ್ದಿ ಇದ್ದವರು.

ಬಿಗ್ ಸಮೂಹ ಬಗ್ಗೋದು ಹೆಂಗ:
  • ಕೃಷ್ ಅನ್ನೋ ಹಿಂದಿ ಸಿನಿಮಾ ನ ನಿಯಮ ಬಾಹಿರವಾಗಿ ಹೆಚ್ಚಿನ ಪ್ರಿಂಟ್ ಕರ್ನಾಟಕದಾಗ ರಿಲೀಸ್ ಮಾಡಿದ್ದವರು 
  • ಬಿಗ್ ಎಫ್.ಎಂ ದಾಗ ಕನ್ನಡ ಚಿತ್ರರಂಗಕ್ಕೆ ಅವಹೇಳನಕಾರಿ ಮಾತಾಡಿದ್ದು.
ಇದೆ ಪುಂಡರೆ ಈ ಸಿನ್ಘಂ ಅನ್ನೋ ಚಿತ್ರದ ಮುಖ್ಯ ನಿರ್ಮಾಪಕರು.ರಿಲಾಯನ್ಸ್ ಸಂಸ್ಥೆ ಅಡಿಯಲ್ಲಿ ಬರೊ ಈ ಬಿಗ್ ಸಮೂಹ ಕಂಪನಿಗಳು ಮ್ಯಾಲೆ ಮ್ಯಾಲೆ ನಮ್ಮ ತಂಟೆಗೆ ಬರಾಕತ್ತಾರ. ಅಷ್ಟ ಅಲ್ಲರಿ ಈ ಬಿಗ್.ಎಫ್.ಎಂ ಕನ್ನಡ ಹಾಡು ಪ್ರಸಾರ ಮಾಡಿ ಬೆಂಗಳೂರುನ್ಯಾಗ ನಂಬರ ವನ ಸ್ಥಾನ ಪಡಕೊಂಡು, ಈಗ ನದಿ ದಾಟಿದ ಮೇಲೆ ಅಮ್ಬಿಗ್ಯಾಂದು ಏನು ಕೆಲಸ ಅಂತ ಕನ್ನಡ ಸಂಗೀತ ಬಿಟ್ಟು ಹಿಂದಿ ಹಿಂದಿ ಅಂತ ಹೊಡ್ಕೋತ ಇದ್ದಾರೆ.ಅದಕ್ಕೆ ಈ ಎಫ್.ಎಂ ಚಾನೆಲ್ ನನ್ನ ಮೊಬೈಲ್ ದಿಂದ ಡಿಲೀಟ್ ಮಾಡಿನಿ.ನನ್ನ ಗೆಳೆಯರು ಅದೇ ಮಾಡಕತ್ತರ ನೋಡ್ರಿ. ನೀವು ಇವರಿಗೆ ಹಿಂಗೆ ಬಗ್ಗಿಸಿದ್ರೆ ಬಗ್ಗೋದು ಇಲ್ಲಾಂದ್ರೆ ನಮಗೆ ನಾಯಿ ಪಾಡೇ ಮಾಡುದಂತು ೧೦೦% ಖರೆ.

ಒಂದೇ ಒಂದು ಪ್ರಶ್ನೆ:

ನಿವೆಲ್ಲಾರಿಗೂ ನನ್ನ ಕಡೆಯಿಂದ ಒಂದೇ ಒಂದು ಪ್ರಶ್ನೆ,ಏನ ಅಂದ್ರೆ: ಕರ್ನಾಟಕ ಮತ್ತು ಕನ್ನಡಿಗರು ಅಂದ್ರೆ ಏನು ತಿಳ ಕೊಂಡಾರ ಈ ಜನ? ಬೇಕಾದವ ಬಂದು, ಬಾಯಿ ಬಂದಹಂಗ ಬೈಸಿ ಕೊಳ್ಳಕ ನಾವೇನು ಬಿಟ್ಟಿ ಬಿದ್ದಿವ? ಅಲ್ಲರಿ ಪದೇ ಪದೇ ನಮ್ಮ ಸ್ವಾಭಿಮಾನಕ್ಕೆ ಈ ರೀತಿ ಪ್ರಶ್ನೆ ಹಾಕ್ತ ಇರೋ ಈ ಜನಕ್ಕೆ ನಾವೇ ಯಾಕೆ ಉತ್ತರ ಕೊಡದೆ ಹಂಗೆ ಕೈ ಕಟ್ಟಿ ಕುತಿವಿ?
ಸುಮ್ಮನೆ ಇದ್ರೆ ಹಿಂಗ ಊರು ಕೊಳ್ಳೆ ಹೊಡೆದು ಹೋದಮ್ಯಾಲೆ ಕ್ವಾಟಿ ಬಾಗಿಲ ಮುಚ್ಚದ್ರಂತ ಅಂತ ಪರಿಸ್ತಿತಿ ಬರುದು ದೂರ ಇಲ್ಲ.ಅದಕ್ಕೆ ಮೊದಲೇ ನಾವು ಜಾಗೃತರಾಗಿ ಎದ್ದೆಳುದು ಮುಖ್ಯ ಅದ.
ಒಂದೇ ಮಾತನಾಗ ಹೇಳಬೇಕು ಅಂದ್ರೆ ಈ ಎಲ್ಲ ಜನಕ್ಕೆ ನಮ್ಮ ಕನ್ನಡದ ಮಾರುಕಟ್ಟೆ ಮ್ಯಾಲೆ ಕಣ್ಣ ಐತಿ,ನಮ್ಮ ಮೂರ್ಖತನದ ಲಾಭ ಇವರಿಗೆ ಸಿಗ್ತಾ ಇದೆ ಅಂದ್ರೆ ತಪ್ಪಲ್ಲ. ನಾವು ಮೊದಲು ಇಂಥವರಿಗೆ ನಮ್ಮ ಮಾರುಕಟ್ಟೆ ಬಿಟ್ಟು ಕೊಡಬಾರದು. ಇರಲಿಕ್ಕೆ ನಿಮ್ಮ ಮನಿ ಬೇಕು ಆದರ ನಿಮ್ಮ ಮಾತು ಬಾಶೆ ಬೇಡ ಅಂದ್ರೆ ಯಾವ ಲೆಕ್ಕರೀ ಇದು? ಹಿಂದಿ ಫಿಲಂಸ್ ಭಾರಿ,ಬಾಲಿವುಡ್ ಮಸ್ತದ ಅಂತ ತಲೆ ಮೇಲೆ ಹೊತ್ತು ಮೆರೆಸುದು ಬಿಟ್ಟು, ನಮ್ಮ ಜನ,ನಮ್ಮ ಬಾಶೆ ಕಡೆ ಸ್ವಲ್ಪ ಕೆಲಸ ಮಾಡ್ಬೇಕು.ಇದರಾಗ ಈ ನಮ್ಮ ಕನ್ನಡ ಸುದ್ದಿ ವಾಹಿನಿಗಳು,ನೆರೆ ಬಾಶೆ ಚಿತ್ರಕ್ಕೆ ಬೇಕಾ ಬಿಟ್ಟಿ ಪ್ರಚಾರ ಕೊಟ್ಟು ಮೆರೆಸ ಕತ್ತಾರ.ಈ ಮಂದಿಗೆ  ನಾವೇ ಮುಂದ ನಿಂತು ತಿಳುವಳಿಕೆ ಹೇಳಬೇಕು. ಇವತ್ತಿಂದು ಐ.ಟಿ.ಯುಗ, ಫೇಸ್ ಬುಕ್,ಟ್ವಿಟ್ಟರ್ ಅಂತ ಸಾಮಾಜಿಕ ತಾಣದಾಗ ಎಲ್ಲರೊಂದಿಗೆ ಸಂಪರ್ಕಿಸ ಬಹುದು.ಇಲ್ಲಿ ನಿಮ್ಮ ವಿಚಾರವನ್ನು ನೇರವಾಗಿ ಸುದ್ದಿ ವಾಹಿನಿಗೆ ಆಗಲಿ,ಜನರಿಗೆ ಆಗಲಿ ನೇರವಾಗಿ ಹೇಳಿ ಜನರಿಗೆ ಬಡಿದೆಬ್ಬಿಸಬಹುದು.
ಸ್ವಾಭಿಮಾನ ಸಾಯಕ ಬಿಟ್ಟು ಸುಮ್ಮನೆ ಕೈಕಟ್ಟಿ ಕೂಡ ಬ್ಯಾಡ್ರಿ.ಬಂಗಾರದ ಮನುಷ್ಯ ಸಿನೆಮಾದಾಗ ನಮ್ಮ ಅಣ್ಣಾವ್ರು ಹಾಡು ನೆನಪು ಮಾಡ್ಕೊಂಡು ಮುಂದ ನಡೀರಿ.

1 comment:

  1. ಭಾಳ್ ಚಲೋ ಬರ್ದೀಯಪ್ಪ! ಈ ಅಂಕಣವನ್ನ ಆ 'ಹುಚ್ಚ ನಾಯಿ'ಗಳೂ ಒಮ್ಮೆ ಓದಿದ್ರ ಭಾಳ್ ಚಲೋ ಇರ್ತತ್ ನೋಡಪ್ಪ!

    ReplyDelete